Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗಿ : ಪ್ರಮೋದ್ ಮಧ್ವರಾಜ್

ಉಡುಪಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಶಾಸಕರಾದ ಪ್ರಮೋದ್ ಮಧ್ವರಾಜ್‌ರವರು ಪಂಚಾಯತ್ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಿದ್ಧರಾಗಲು ಕರೆ ನೀಡಿದರು. ಸಭೆಯಲ್ಲಿ ಪಕ್ಷದ ನಿಷ್ಠಾವಂತ ನಾಯಕರು ಹಾಗೂ ಕಾರ್ಯಕರ್ತರಾದ ಶ್ರೀ ಸದಾಶಿವ ಕೋಟ್ಯಾನ್ ಕೊಡಂಕೂರು, ಉಮೇಶ್ ಪುತ್ರನ್ ಶೆಟ್ಟಿಬೆಟ್ಟು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಕೊಡಂಕೂರು ಪ್ರೆಂಡ್ಸ್, ಬ್ರಹ್ಮಬೈದರ್ಕಳ ಗರಡಿ ಮುಂತಾದ ಸಂಸ್ಥೆಗಳಲ್ಲಿ ದುಡಿದ ಸದಾಶಿವ ಕೋಟ್ಯಾನ್ ಅವರು ಕಾಂಗ್ರೆಸ್ ಪಕ್ಷದ ಸಕ್ರೀಯ ಸದಸ್ಯರಾಗಿದ್ದು, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು, ಉಡುಪಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೆಲ್‌ನ ಅಧ್ಯಕ್ಷರಾಗಿ, ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಶಾಸಕರು ಸ್ಮರಿಸಿದರು.

ಉಮೇಶ್ ಪುತ್ರನ್ ರವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಗೆ ದುಡಿದಿದ್ದರು ಎಂದು ಶಾಸಕರು ಸ್ಮರಿಸಿದರು. ಪಿ.ಡಬ್ಲ್ಯು.ಡಿ. ಅಪೆಂಡಿಕ್ಸ್ ಇ ಯೋಜನೆಯಲ್ಲಿ ಸುಮಾರು ೧೮.೫ ಕೋಟಿ ರೂಪಾಯಿಯು ಮಂಜೂರಾಗಿರುತ್ತದೆ.

ಅಮ್ಮುಂಜೆ, ಪೆರಂಪಳ್ಳಿ, ಉಪ್ಪೂರು, ಪರಾರಿ, ಶೀಂಬ್ರ ಸೇತುವೆ ಕಾಮಗಾರಿಗೆ ಹತ್ತು ಕೋಟಿ. ಕುಕ್ಕಿಕಟ್ಟೆ, ಅಲೆವೂರು ರಾಜ್ಯ ಹೆದ್ದಾರಿಯನ್ನಾಗಿಸಲು ೨.೫ ಕೋಟಿ. ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆ ದ್ವಿಪಥಗೊಳಿಸಲು ೧.೪೦ ಕೋಟಿ. ಮಲ್ಪೆ, ಪಡುಕೆರೆ ರಸ್ತೆಗೆ ೫೦ ಲಕ್ಷರೂಪಾಯಿ. ಮಲ್ಪೆ ತೆಂಕನಿಡಿಯೂರು ರಸ್ತೆ ಅಭಿವೃದ್ಧಿಗೆ ೨.೨೫ ಕೋಟಿ ರೂಪಾಯಿ. ಬೀಚ್ ಅಭಿವೃದ್ಧಿಗೆ ಪ್ರವಾಸ ತಾಣಗಳ ಅಭಿವೃದ್ಧಿ ಯೋಜನೆಯಲ್ಲಿ ೧.೬೯ ಕೋಟಿ. ಮಲ್ಪೆ, ತೊಟ್ಟಂ, ತೆಂಕನಿಡಿಯೂರು ರಸ್ತೆ ಅಭಿವೃದ್ಧಿಗೆ ೨.೨೫ ಕೋಟಿ ರೂಪಾಯಿ. ಉಡುಪಿ ನಗರಸಭೆಗೆ ವಿಶೇಷ ಅನುದಾನವಾಗಿ ಮೂರು ಕೋಟಿ ರೂಪಾಯಿ ಈ ಎಲ್ಲಾ ಅನುದಾನಗಳು ಮಂಜೂರಾಗಿರುವುದನ್ನು ಶಾಸಕರು ಸಭೆಗೆ ತಿಳಿಸಿದರು.

ಅಮೃತ್ ಶೆಣೈ ಹಾಗೂ ಅಶೋಕ್ ಪೂಜಾರಿಯವರು ಸದಾಶಿವ ಕೋಟ್ಯಾನ್‌ರ ಕಾರ್ಯವೈಖರಿಯನ್ನು ಸ್ಮರಿಸಿದರು. ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ದಿವಾಕರ್ ಕುಂದರ್, ಬಿ. ನರಸಿಂಹಮೂರ್ತಿ, ಸುಜಯ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಗಣೇಶ್ ನೆರ್ಗಿ, ಪ್ರಖ್ಯಾತ್ ಶೆಟ್ಟಿ, ವಿಕಾಸ್ ಶೆಟ್ಟಿ, ಗೋಪಾಲ್ ಎಲ್.ಐ.ಸಿ., ಅಬ್ದುಲ್ ರೆಹಮಾನ್, ರಮೇಶ್ ಕಾಂಚನ್, ಸೆಲಿನ್ ಕರ್ಕಡ, ಚಂದ್ರಿಕಾ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಹಸನ್ ಅಜ್ಜರಕಾಡು, ಕೃಷ್ಣ ಎಸ್. ಅಮೀನ್, ಅನಂತಕೃಷ್ಣ ಪ್ರಭು, ಕೀರ್ತಿ ಶೆಟ್ಟಿ, ಸಾಯಿರಾಜ್ ಕೋಟ್ಯಾನ್, ಕೃಷ್ಣಪ್ಪ ಮೈಂದನ್, ನವೀನಚಂದ್ರ ಮಲ್ಪೆ, ತಾರಾನಾಥ ಸುವರ್ಣ, ಬಿ.ಪಿ. ರಮೇಶ್ ಪೂಜಾರಿ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ಯತೀಶ್ ಕರ್ಕೇರಾ, ಗಣೇಶರಾಜ್ ಸರಳೇಬೆಟ್ಟು, ಸುಭಾಷ್ ಕೊಳ, ಲಕ್ಷ್ಮಣ ಪೂಜಾರಿ, ಸೋಮನಾಥ ಬಿ.ಕೆ., ಜಾನ್ ಕ್ರಿಸ್ಟೋಫರ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ. ಜನಾರ್ದನ ಭಂಡಾರ್ಕರ್ ಸ್ವಾಗತಿಸಿ, ಸುರೇಶ್ ಶೆಟ್ಟಿ ಬನ್ನಂಜೆ ಧನ್ಯವಾದವಿತ್ತರು.

No Comments

Leave A Comment