Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮುಂಬೈನ ಕಟ್ಟಡದಲ್ಲಿ ಭಾರಿ ಬೆಂಕಿ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು

ಮುಂಬೈ: ದಕ್ಷಿಣ ಮುಂಬೈನ ಕಲಾ ದೇವಿ ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯ ಕಟ್ಟಡವಾದ ಗೋಕುಲ್‌ ನಿವಾಸದಲ್ಲಿ ಶನಿವಾರ ಸಂಜೆ 4.30ರ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಬೆಂಕಿ ನಂದಿಸಲು ಹೋದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಬಲಿಯಾಗಿದ್ದಾರೆ. ನಿನ್ನೆ ಕಾಣೆಯಾಗಿದ್ದ ಇಬ್ಬರ ಸುಟ್ಟು ಕರಕಲಾಗಿರುವ ಶವ ಭಾನುವಾರ ಪತ್ತೆಯಾಗಿದೆ.

3 ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಐವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಇವರನ್ನು ಸಮೀಪದ ಮಸಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡದ ಮೊದಲ ಮೂರು ಮಹಡಿಗಳಲ್ಲಿ ಬಟ್ಟೆ ಗೋದಾಮು ಹಾಗೂ ಅಂಗಡಿಗಳಿದ್ದು, ನಾಲ್ಕನೇ ಮಹಡಿಯಲ್ಲಿ ಕೆಲ ಮನೆಗಳಿವೆ. ಮರದ ತೊಲೆಗಳಿಂದ ನಿರ್ಮಿಸಿದ ಈ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಬೆಂಕಿ ಹತ್ತಲು ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಕಾಯಾಚರಣೆಯಲ್ಲಿ 17 ಅಗ್ನಿಶಾಮಕ ವಾಹನಗಳು ಹಾಗೂ 10 ನೀರಿನ ಟ್ಯಾಂಕರ್‌ಗಳನ್ನು ಬಳಸಿ ರಾತ್ರಿ 8ರ ಹೊತ್ತಿಗೆ ಪರಿಸ್ಥಿತಿ ನಿಯಂತ್ರಿಸಲಾಗಿದೆ. ಆದರೆ ಕಿಷ್ಕಿಂಧೆಯಂತೆ ಸಣ್ಣ ದಾರಿ ಇರುವ ಕಾರಣ ಅಗ್ನಿಶಾಮಕ ದಳಕ್ಕೆ ಈ ಸ್ಥಳಕ್ಕೆ ಬರಲು ಭಾರಿ ತೊಂದರೆ ಆಯಿತು.

No Comments

Leave A Comment