Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬಾಕ್ಸಿಂಗ್ ಮೋಜಿಗೆ ಬಲಿಯಾಯ್ತು ಯುವ ಜೀವ

ಹೈದರಾಬಾದ್: ಇತ್ತೀಚೆಗಷ್ಟೇ ನಡೆದ ಫೈಟ್ ಆಫ್ ಸೆಂಚುರಿ ಬಾಕ್ಸಿಂಗ್ ಹೋರಾಟದಲ್ಲಿ ಫಿಲಿಪಿನ್ಸ್‌ನ ಮ್ಯಾನಿ ಪ್ಯಾಕ್ವಿಯೊರನ್ನು ಸೋಲಿಸಿ ಅಮೆರಿಕದ ಫ್ಲಾಯ್ಡ್ ಮೇವೆದರ್ ಜೂನಿಯರ್ ಬಾಕ್ಸಿಂಗ್ ಸಾಮ್ರಾಟರೆನಿಸಿದ್ದು, ಈ ಮಾದಿರಿಯಲ್ಲಿ ಹೈದರಾಬಾದ್ ನಲ್ಲಿ ಯುವಕರ ಗುಂಪೊಂದು ಬಾಕ್ಸಿಂಗ್ ಮಾಡಲು ಹೋಗಿ ಬಾಕ್ಸಿಂಗ್ ಮೋಜಿಗೆ ಜೀವವೊಂದು ಬಲಿಯಾಗಿದೆ.

ಮೇ 3ರಂದು ಹೈದರಾಬಾದ್ ನಗರದ ಓಲ್ಡ್ ಸಿಟಿ ಪ್ರದೇಶದಲ್ಲಿ ಯುವಕರು ಬಾಕ್ಸಿಂಗ್ ನಂತೆ ಬೆಟ್ಟಿಂಗ್ ಫೈಟ್ ನಡೆಸಿದ್ದಾರೆ. ಇಬ್ಬರು ಯುವಕರು ಪರಸ್ಪರ ಹೊಡೆದಾಟಿಕೊಂಡಿದ್ದಾರೆ. ಹೊಡೆದಾಟದ ಮಧ್ಯೆ 17 ವರ್ಷದ ನಬೀಲ್ ಮೊಹಮ್ಮದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ನಬೀಲ್ ಸ್ನೇಹಿತರು ಬೈಕ್ ಅಪಘಾತದಲ್ಲಿ ನಬೀಲ್ ಗೆ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಆಸ್ಪತ್ರೆಗೆ ಸೇರಿದ್ದರು. ಬಳಿಕ ಮೀರ್ ಚೌಕ್ ಪೊಲೀಸ್ ಠಾಣೆಯಲ್ಲಿ ಅಪಘಾತ ಕೇಸ್ ದಾಖಲಿಸಿದ್ದರು.

ನಬೀಲ್ ತಂದೆ ದಸ್ತಗೀರ್ ದುಬೈನಲ್ಲಿದ್ದು ಮಗನ ಸಾವಿನ ಸುದ್ದಿ ತಿಳಿದ ಕೂಡಲೇ ಹೈದರಾಬಾದ್ ಮರಳಿದ್ದರು. ಮಗನ ಅಂತ್ಯಸಂಸ್ಕಾರ ನೆರವೇರಿಸಿದ ದಸ್ತಗೀರ್ ಅವರು, ಬಳಿಕ ನಬೀಲ್ ಸ್ನೇಹಿತರನ್ನು ಒಬ್ಬೊಬ್ಬರಾಗಿ ಕರೆದು ಮಗನ ಸಾವಿನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಒಬ್ಬೊಬ್ಬರು ಒಂದೊಂದು ರೀತಿ ಕಥೆ ಹೇಳಿದಾಗ ಅನುಮಾನಗೊಂಡ ದಸ್ತಗೀರ್ ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮೊದಲು ಅಪಘಾತ ಎಂದು ದಾಖಲಿಸಿದ್ದ ಮೀರ್ ಚೌಕ್ ಪೊಲೀಸರು ನಂತರ ಅನುಮಾನಾಸ್ಪದ ಸಾವು ಎಂದು ದಾಖಲಿಸಿದ್ದಾರೆ. ಸದ್ಯ ನಬೀಲ್ ಸ್ನೇಹಿತರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇಬ್ಬರ ನಡುವಿನ ಹೊಡೆದಾಟದಲ್ಲಿ ನಬೀಲ್ ಸಾವನ್ನಪ್ಪಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಹೊಡೆದಾಟದ ವೇಳೆ ಚಿತ್ರೀಕರಿಸಿದ್ದ ವಿಡಿಯೋ ಸಹ ಇದೀಗ ನೆಟ್ ನಲ್ಲಿ ಹರಿದಾಡುತ್ತಿದ್ದು, ಹೊಡೆದಾಟದ ಭೀಕರತೆಗೆ ಸಾಕ್ಷಿಯಾಗಿದೆ.

No Comments

Leave A Comment