Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ರಾಜ್ಯ ಸರ್ಕಾರದ ವಿರುದ್ದ ಮತ್ತೆ ಗರಂ ಆದ ಸ್ಪೀಕರ್‌ ಕಾಗೋಡು

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಕೆಲ ನಿರ್ಧಾರಗಳು ಮತ್ತು ಸಚಿವರ ವರ್ತನೆ ವಿರುದ್ದ ಈ ಹಿಂದೆ ಹಲವು ಬಾರಿ ಗರಂ ಆಗಿರುವ  ವಿಧಾನಸಭಾ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು ಭಾನುವಾರ ಮತ್ತೆ ಗರಂ ಆಗಿದ್ದಾರೆ.

ಕೆರೆ ಒತ್ತುವರಿ ತೆರವು  ಮಾಡುವ ವಿಚಾರಕ್ಕೆ ಸಂಬಂಧಿಸಿ  ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ , ‘ಸರ್ಕಾರ ತಪ್ಪು ಮಾಡಿ ಜನರನ್ನು ನೇಣಿಗೆ ಸಿಲುಕಿಸುವುದು ತಪ್ಪು. ಆಡಳಿತದಲ್ಲಿ ಇದಕ್ಕಿಂತ ಕೆಟ್ಟ ನಡೆ ಇನ್ನೊಂದಿಲ್ಲ’ ಎಂದು ಅವರು ಕಿಡಿ ಕಾರಿದರು.

‘ಆಕಾಶದಿಂದ ಕೆಳಗೆ ಇಳಿದವರು ಯಾರೂ ಇಲ್ಲ ,ಬಡವರಿಗೊಂದು ಶ್ರೀಮಂತರಿಗೊಂದು ಕಾನೂನು ಸರಿಯಲ್ಲ .ಈ ಸಂಬಂಧ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ’ ಎಂದು  ಅವರು ಹೇಳಿದರು.

No Comments

Leave A Comment