Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಬೆಂಗಳೂರಿನಲ್ಲಿ ಭಾರೀ ಮಳೆ : ಹಲವೆಡೆ ಸಂಚಾರ ಅಸ್ತವ್ಯಸ್ತ

ಬೆಂಗಳೂರು : ರಾಜ್ಯ ರಾಜಧಾನಿಯ ಹಲವೆಡೆಗಳಲ್ಲಿ ಮಂಗಳವಾರ ಬೆಳಗಿನ ಜಾವವೇ ವರುಣ ಎಂಟ್ರಿಕೊಟ್ಟಿದ್ದಾನೆ. ಈ ಅನಿರೀಕ್ಷಿತ ವರ್ಷಧಾರೆ ಶಾಲೆ-ಕಛೇರಿಗೆ ಹೋಗುವವರ ಮೇಲೆ ಭಾರೀ ಪರಿಣಾಮವನ್ನು ಬೀರುತ್ತಿದೆ.

ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ಮೈಸೂರು ರಸ್ತೆ, ವಿಜಯನಗರ, ಕೆಂಗೇರಿ, ಜ್ಞಾನ ಭಾರತಿ, ಮಲ್ಲೇಶ್ವರಂ, ಜೆ.ಸಿ. ರಸ್ತೆ, ರಿಚ್ಮಂಡ್‌ ಟೌನ್‌, ಕೋರಮಂಗಲ, ಶಾಂತಿನಗರ, ದೀಪಾಂಜಲಿ ನಗರ, ದಾಸರಹಳ್ಳಿ, ನಾಗರಬಾವಿ, ಹೊಸೂರು ರಸ್ತೆ, ಬನ್ನೇರು ಘಟ್ಟ ರಸ್ತೆ ಮುಂತಾದೆಡೆಗಳಲ್ಲಿ ಭಾರೀ ಮಳೆ ಸುರಿದ ಕಾರಣ ಹಲವೆಡೆಗಳಲ್ಲಿ ಅಂಡರ್‌ ಪಾಸ್‌ಗಳಿಗೆ ನೀರು ನುಗ್ಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಹಲವೆಡೆಗಳಲ್ಲಿ ಟ್ರಾಫಿಕ್‌ ಜಾಂ ಉಂಟಾಗಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ.

ಸುಳಿಗಾಳಿಯ ಕಾರಣದಿಂದ ಈ ಅಕಾಲಿಕ ಮಳೆ ಉಂಟಾಗಿದೆ ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಇನ್ನೂ ಎರಡು ದಿನಗಳ ಕಾಲ ನಗರದಲ್ಲಿ ಮಳೆ ಸುರಿಯಲಿದೆ ಹವಾಮಾನ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ನಗರದ ವಿವಿಧ ಭಾಗಗಳಲ್ಲಿ ಡ್ರೈನೇಜ್‌ ಪೈಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು.

ಒಟ್ಟಿನಲ್ಲಿ, ಸಂಜೆ ವೇಳೆಗೆ ಸಾಮಾನ್ಯವಾಗಿ ಎಂಟ್ರಿಕೊಟ್ಟು ಬೆಂಗಳೂರಿಗರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ವರುಣ ಇಂದು ಮಾತ್ರ ಬೆಳ್ಳಂಬೆಳಗ್ಗೆಯೇ ತನ್ನ ಇರವನ್ನು ಪ್ರಕಟಪಡಿಸಿರುವುದು ಅನೇಕರಿಕೆ ತಲೆನೋವು ತರಿಸಿದೆ.

 

No Comments

Leave A Comment