Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಹಿಮಪಾತ: ಜಮ್ಮು-ಶ್ರೀನಗರ ಹೆದ್ದಾರಿ ಬಂದ್

ಶ್ರೀನಗರ(ಐಎಎನ್ ಎಸ್): ಕಾಶ್ಮೀರ ಕಣಿವೆಯಲ್ಲಿ ವಿಪರೀತ ಹಿಮಪಾತದಿಂದ ಸೋಮವಾರ ವಿಮಾನ ಸಂಚಾರ ವ್ಯತ್ಯಯವಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಶ್ರೀನಗರ ವಿಮಾನ ನಿಲ್ದಾಣದ ರನ್ ವೇ ಹಿಮಾವೃತವಾಗಿದೆ. ಹಿಮಪಾತ ಆಗುತ್ತಿರುವುದರಿಂದ ದೂರದ ವೀಕ್ಷಣೆ ಸಾಧ್ಯವಾಗದೆ ಸೋಮವಾರದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಶ್ರೀನಗರ ಹೆದ್ದಾರಿ ಬಂದ್ ಆಗಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತಿವೆ. ಬನಿಹಾಲ್ ಪ್ರದೇಶದಲ್ಲಿ ಹೆಚ್ಚಿನ ಹಿಮಪಾತವಾಗಿದ್ದು, ರಾಂಬಾನ್ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಹಿಮಪಾತ ಮುಂದುವರಿದಿದ್ದು, ಮಂಗಳವಾರವೂ ಹಿಮಪಾತ ಉಂಟಾಗಲಿದೆ. ಶ್ರೀನಗರದಲ್ಲಿ ಸೋಮವಾರ ಕನಿಷ್ಠ ಉಷ್ಣಾಂಶ 0.4 ಡಿಗ್ರಿ ಸೆಲ್ಸಿಯಸ್ ಇದ್ದು, ಎಂಟು ಇಂಚುಗಳಷ್ಟು ದಪ್ಪ ಹಿಮ ಬಿದ್ದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಲ್ಮಾರ್ ಗ್ ಕಣಿವೆಯಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 3.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 42 ಸೆ.ಮೀ.ನಷ್ಟು ದಪ್ಪ ಹಿಮ ಬಿದ್ದಿದೆ. ಪಹಲ್ಗಾಮ್ ನಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 0.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 25 ಸೆ.ಮೀ. ನಷ್ಟು ದಪ್ಪ ಹಿಮಾವೃತವಾಗಿದೆ.
ಕಾರ್ಗಿಲ್ ನಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ ಮೈನಸ್ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 6 ಸೆ.ಮೀ. ನಷ್ಟು ದಪ್ಪ ಹಿಮಾವೃತವಾಗಿದೆ. ಲೇಹ್ ನಲ್ಲಿ ಉಷ್ಣಾಂಶ ಮೈನಸ್ 0.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜಮ್ಮುವಿನಲ್ಲಿ 11.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

No Comments

Leave A Comment