Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸಾರ್ಕ್‌ಯಾತ್ರೆ: ಬಾಂಗ್ಲಾದೇಶದಲ್ಲಿ ಜೈಶಂಕರ್‌

ಢಾಕಾ (ಐಎಎನ್‌ಎಸ್‌):  ‘ಸಾರ್ಕ್‌ಯಾತ್ರೆ’ಯ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್‌ ಅವರು ಸೋಮವಾರ ಬಾಂಗ್ಲಾದೇಶ ರಾಜಧಾನಿ ಢಾಕಾಗೆ ಭೇಟಿ ನೀಡಿದ್ದಾರೆ.

ಭಾನುವಾರ ಭೂತಾನ್‌ ಭೇಟಿಯ ಮೂಲಕ ತಮ್ಮ ಯಾತ್ರೆ ಆರಂಭಿಸಿದ್ದ ಜೈಶಂಕರ್ ಅವರು, ಬಾಂಗ್ಲಾದೇಶದ ಹಜರತ್ ಷಾಹ್ಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಶಾಹಿದುಲ್ ಹಕ್ ಅವರು ಸ್ವಾಗತಿಸಿದರು. ಬಳಿಕ ಜೈಶಂಕರ್ ಅವರು ಮಾತುಕತೆ ನಡೆಸಲು ವಿದೇಶಾಂಗ ಕಚೇರಿಗೆ ತೆರಳಿದರು.

ದ್ವಿಪಕ್ಷೀಯ  ಮಾತುಕತೆ, ಸಾರ್ಕ್‌ ರಾಷ್ಟ್ರಗಳ ನಡುವಣ ಸಹಕಾರ ಹಾಗೂ ಬಾಂಗ್ಲಾದೇಶ, ಭೂತಾನ್, ಭಾರತ ಹಾಗೂ ನೇಪಾಳ ಒಳಗೊಂಡ ಪ್ರಾದೇಶಿಕ ಸಹಕಾರದ ಮೇಲೆ ಮಾತುಕತೆ ಕೇಂದ್ರೀಕೃತವಾಗಲಿದೆ.

ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಎಚ್‌.ಮಹ್ಮೂದ್‌ ಅಲಿ ಅವರನ್ನು ಭೇಟಿಯಾಗಲಿರುವ ಅವರು, ಸಂಜೆ ವೇಳೆಗೆ ಪ್ರಾಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಒಂದು ದಿನದ ಮಟ್ಟಿನ ಭೇಟಿ ಬಳಿಕ ಅವರು, ಮಂಗಳವಾರ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ಗೆ ತೆರಳಿದ್ದು, ಬಳಿಕ ನವದೆಹಲಿಗೆ ಮರಳಲಿದ್ದಾರೆ.

No Comments

Leave A Comment