Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಹಿಂದುಗಳೇ, ಖಾನ್‌ ತ್ರಿವಳಿಗಳ ಸಿನೇಮಾ ನೋಡಬೇಡಿ: ಸಾಧ್ವಿ ಪ್ರಾಚಿ

ಹೊಸದಿಲ್ಲಿ: ಬಾಲಿವುಡ್‌ನ‌ ಖಾನ್‌ ತ್ರಿವಳಿಗಳ ಸಿನೇಮಾಗಳು ಲವ್‌ ಜೆಹಾದ್‌ ಅನ್ನು ಪ್ರೋತ್ಸಾಹಿಸುತ್ತವೆ; ಹಾಗಾಗಿ ಹಿಂದುಗಳು ಅವರ ಚಿತ್ರಗಳನ್ನು ನೋಡಬಾರದು; ಅವುಗಳನ್ನು ನಿಷೇಧಿಸಬೇಕು ಎಂದು ಭಾರತೀಯ ಜನತಾ ಪಕ್ಷದ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ. ಈ ಮೂಲಕ ಅವರು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ಸಾಧ್ವಿ ಪ್ರಾಚಿ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು ಭಾನುವಾರ ಡೆಹರಾಡೂನ್‌ನಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್‌ ಸಮಾವೇಶದಲ್ಲಿ.

ಸಾಧ್ವಿ ಪ್ರಾಚಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಭಾರತೀಯ ಹುಡುಗಿಯನ್ನು ಮದುವೆಯಾಗಬೇಕು ಎಂದು ಅಪ್ಪಣೆ ಕೊಡಿಸಿದ್ದಾರೆ.

ಸಾಧ್ವಿ ಪ್ರಾಚಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಆಕೆ ಹಿಂದೂ ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕು; ಅವುಗಳಲ್ಲಿ ಒಂದನ್ನು ದೇಶದ ಗಡಿ ರಕ್ಷಣೆಗೆ, ಇನ್ನೊಂದನ್ನು ಸಮಾಜ ಸೇವೆ, ಮತ್ತೂಂದನ್ನು ಸನ್ಯಾಸತ್ವಕ್ಕೆ ಹಾಗೂ ಕೊನೆಯದನ್ನು ವಿಶ್ವ ಹಿಂದೂ ಪರಿಷತ್‌ ಸೇವೆಗೆ ಕೊಡಬೇಕು ಎಂದು ಹೇಳಿದ್ದರು. ದೇಶಕ್ಕೆ ಈ ರೀತಿಯ ಅಗತ್ಯವಿರುವುದರಿಂದ ಹಿಂದೂ ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕೆಂಬ ತನ್ನ ಹೇಳಿಕೆಯನ್ನು ಆಕೆ ಸಮರ್ಥಿಸಿಕೊಂಡಿದ್ದರು.

No Comments

Leave A Comment