Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಡುಪಿ ಡಿಸಿಐಬಿ ಕಾರ್ಯಾಚರಣೆ…ಕಳ್ಳನ ಬಂಧನ: 13.40 ಲ.ರೂ. ಸೊತ್ತು ವಶ

ಉಡುಪಿ: ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದವರು ಕಳ್ಳನೊಬ್ಬನನ್ನು ಬಂಧಿಸಿ ಆತನಿಂದ 13,40,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಲತಃ ಉಡುಪಿ ತಾ| ಹಾವಂಜೆಯ ಗಣಿಬೆಟ್ಟು ಮನೆಯ ಪ್ರಸ್ತುತ ಮೂಡಬಿದಿರೆ ಕೋಟೆಬಾಗಿಲು ನಿವಾಸಿ ನವೀನ ಶೆಟ್ಟಿ ಯಾನೆ ಮಹಮ್ಮದ್‌ ನಜೀಮ್‌ (32) ಬಂಧಿತ ಆರೋಪಿ. ಈತನಿಂದ ಚಿನ್ನದ ಕರಿಮಣಿ ಸರ, ಉಂಗುರ, 2 ಸಪೂರ ಸರ ಹಾಗೂ ಯಾವುದೇ ದಾಖಲಾತಿ ಇಲ್ಲದ ಝೈಲೋ ಕಾರು (ಕೆಎ 41 ಎ 702), ನಂಬರ್‌ ನೊಂದಣಿಯೇ ಇಲ್ಲದ ಟಾಟಾ ಇಂಡಿಗೋ ಕಾರು ಮತ್ತು ಯಮಹಾ ಫೇಜರ್‌ ಬೈಕ್‌ (ಕೆಎ 20 ಕ್ಯೂ 9759) ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿನ್ನದ ಸೊತ್ತುಗಳನ್ನು ಆತ ಮಣಿಪಾಲ ಠಾಣಾ ವ್ಯಾಪ್ತಿಯ ಸಂತೋಷ ನಗರದ ಅಶ್ರಫ್ ಅವರ ಮನೆಯಲ್ಲಿ ಕಳವುಗೈದಿದ್ದ.

ಸೊತ್ತುಗಳು ಮತ್ತು ಆರೋಪಿಯನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದ್ದು, ಮಣಿಪಾಲ ಪೊಲೀಸರು ಆರೋಪಿಯನ್ನು ಗುರುವಾರ ರಾತ್ರಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅರೆಸ್ಟ್‌ ವಾರಂಟ್‌ ಇದ್ದಿತ್ತು…

ಆರೋಪಿ ನವೀನ ಯಾನೆ ನಜೀಮನ ಮೇಲೆ ಈ ಹಿಂದೆಯೇ ಕಳ್ಳತನದ ಆರೋಪವಿತ್ತು. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ ಆರೋಪ ಆತನ ಮೇಲಿತ್ತು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಕಾರಣದಿಂದ ನ್ಯಾಯಾಲಯವು ಆತನಿಗೆ ಅರೆಸ್ಟ್‌ ವಾರಂಟ್‌ ಹೊರಡಿಸಿತ್ತು.

ಕಾರ್ಯಾಚರಿಸಿದ ಪೊಲೀಸ್‌ ತಂಡ

ಎಸ್‌ಪಿ ಅಣ್ಣಾಮಲೈ ಕೆ. ಅವರ ನಿರ್ದೇಶನ, ಹೆಚ್ಚುವರಿ ಎಸ್‌ಪಿ ಸಂತೋಷ್‌ ಕುಮಾರ್‌, ಡಿವೈಎಸ್‌ಪಿ ಚಂದ್ರಶೇಖರ ಕೆ.ಎಂ. ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್‌ ಟಿ.ಆರ್‌. ಜೈಶಂಕರ್‌ ನೇತೃತ್ವದ ಪೊಲೀಸ್‌ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ರೊಸಾರಿಯಾ ಡಿಸೋಜ, ಸಿಬಂದಿ ರವಿಚಂದ್ರ, ಸುರೇಶ್‌, ಚಂದ್ರ ಶೆಟ್ಟಿ, ಸಂತೋಷ್‌ ಅಂಬಾಗಿಲು, ಸಂತೋಷ್‌ ಕುಂದರ್‌, ರಾಮು ಹೆಗ್ಡೆ, ಪ್ರವೀಣ, ರಾಘವೇಂದ್ರ ಉಪ್ಪುಂದ, ಥಾಮ್ಸನ್‌, ಶಿವಾನಂದ, ದಿನೇಶ್‌ ಮತ್ತು ವಾಹನ ಚಾಲಕ ಚಂದ್ರಶೇಖರ್‌ ಪಾಲ್ಗೊಂಡಿದ್ದರು.

No Comments

Leave A Comment