Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ರಣಜಿ ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಬೆಂಗಳೂರು: ಮುಂಬೈ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಜಯ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಬಲಿಷ್ಠ ಮುಂಬೈ ತಂಡವನ್ನು ಕರ್ನಾಟಕ 112 ರನ್‌ಗಳ ಅಂತರದಲ್ಲಿ ಬಗ್ಗು ಬಡಿದಿದ್ದು, ಇದರೊಂದಿಗೆ ಫೈನಲ್ ಪ್ರವೇಶಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ದಿನವಾದ ಇಂದು ಮುಂಬೈಗೆ ಗೆಲ್ಲಲ್ಲು 168 ರನ್‌ಗಳ ಅಗತ್ಯ ಇತ್ತು. ನಾಲ್ಕು ವಿಕೆಟ್‌ಗಳು ಮುಂಬೈ ಕೈಯಲ್ಲಿತ್ತು. ನಾಲ್ಕನೇ ದಿನದಾಟ ಆರಂಭವಾಗುತ್ತಿದ್ದಂತೆ 56 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದಕೊಂಡು ಕರ್ನಾಟಕಕ್ಕೆ ಶರಣಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಮುಂಬೈ, ದಿನದಾಟ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 277 ರನ್ ದಾಖಲಿಸಿದೆ. ಗೆಲ್ಲಲುನ್ನು 168 ರನ್‍ಗಳ ಅಗತ್ಯವಿದ್ದು, ಪಂದ್ಯ ನಾಲ್ಕನೇ ದಿನದಾಟಕ್ಕೆ ಜಾರಿದೆ. ಎರಡನೇ ದಿನದಾಟದ ಮೊತ್ತ ವಿಕೆಟ್ ನಷ್ಟವಿಲ್ಲದೆ 61ರಿಂದ ಮೂರನೇ ದಿನದಾಟ ಆರಂಬಿsಸಿದ ಮುಂಬೈ, ಬಹುತೇಕ ದಿನದಾಟದ ಆರಂಭಿಕ ಎರಡು ಅವಧಿಗಳ ಕಾಲ ಕರ್ನಾಟಕ ಬೌಲರ್‍ಗಳ ದಾಳಿಯನ್ನು ರಕ್ಷಣಾತ್ಮಕವಾಗಿ ಎದುರಿಸುವ ಮೂಲಕ ಪ್ರತಿರೋಧ ನೀಡುವ ಪ್ರಯತ್ನ ನಡೆಸಿದರು. ಆದರೆ ಮಹತ್ವದ ಹಂತದಲ್ಲಿ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಅಂತಿಮ ಹಂತದಲ್ಲಿ ಲಾಡ್ ಹಾಗೂ ನಾಯರ್ ತಂಡಕ್ಕೆ ಆಸರೆಯಾದರು.

ನಾಯಕನ ಹೋರಾಟ ವ್ಯರ್ಥ್ಯ: ಕರ್ನಾಟಕ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ಪರ ಕೆಚ್ಚೆದೆಯ ಹೋರಾಟ ನಡೆಸಿದ್ದು, ನಾಯಕ ಆದಿತ್ಯ ತಾರೆ. ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿದ ತಾರೆ, 15 ಬೌಂಡರಿ ಸೇರಿದಂತೆ 207 ಎಸೆತಗಳಲ್ಲಿ 98 ರನ್ ಗಳಿಸಿದರು. ಆದರೆ, ಶತಕದ ಹೊಸ್ತಿಲಲ್ಲಿ ಎಡವಿದ ಅವರು ತಮ್ಮ ಹೋರಾಟದ ಇನಿಂಗ್ಸ್‍ಗೆ ತೆರೆ ಎಳೆದುಕೊಂಡರು. ಎರಡನೇ ದಿನದಾಟದಲ್ಲಿ ಅಜೇಯವಾಗುಳಿದಿದ್ದ ತಾರೆ ಹಾಗೂ ಅಖಿಲ್ ಹೆರ್ವಾಡ್ಕರ್ ಮೂರನೇ ದಿನವೂ ತಂಡವನ್ನು ಉತ್ತಮ ಹಾದಿಯಲ್ಲಿ ಕರೆದೊಯ್ಯುವ ಗುರಿ ಹೊಂದಿದ್ದರು. ಆದರೆ, 31 ರನ್ ದಾಖಲಿಸಿದ್ದ ಅಖಿಲ್, ವೇಗಿ ಅಬಿsಮನ್ಯು ಮಿಥುನ್ ಎಲ್‍ಬಿ ಬಲೆಗೆ ಬಿದ್ದರು.ಈ ವೇಳೆ ತಂಡವನ್ನು ಮುನ್ನಡೆಸಿದ ಆದಿತ್ಯ ತಾರೆ ಕರ್ನಾಟಕ ಬೌಲರ್‍ಗಳಿಗೆ ತಲೆ ನೋವಾಗಿ ಪರಿಣಮಿಸಿದರು. ಎರಡನೇ ವಿಕೆಟ್‍ಗೆ ಜತೆಯಾದ ಮುಂಬೈನ ಪ್ರಮುಖ ಬ್ಯಾಟ್ಸ್‍ಮನ್ ಶ್ರೇಯಸ್ ಅಯ್ಯರ್, ತಾರೆ ಜತೆಗೂಡಿ ಉತ್ತಮವಾಗಿ ಇನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್‍ಗೆ 76 ರನ್ ಕಲೆ ಹಾಕಿತು. ಆರಂಭದಲ್ಲಿ ಉತ್ತಪ್ಪರಿಂದ ಜೀವದಾನ ಪಡೆದ ಅಯ್ಯರ್ 50 ರನ್ ದಾಖಲಿಸಿ ಕರ್ನಾಟಕಕ್ಕೆ ಸವಾಲಾಗಿದ್ದರು. ಮಿಥುನ್ ಮಾರಕ ಬೌನ್ಸ್ ಅನ್ನು ಪುಲ್ ಮಾಡಲು ಹೋಗಿ ಸುಚಿತ್‍ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು.

ಸೂರ್ಯಕುಮಾರ್ ಯಾದವ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತಿದ್ದ ಆದಿತ್ಯ ತಾರೆ, 98 ರನ್‍ಗಳಿಸಿದ್ದಾಗ ಎಸ್. ಅರವಿಂದ್ ಅದ್ಭುತ ಎಸೆತಕ್ಕೆ ಬಲಿಯಾದರು. ಮತ್ತೊಂದೆಡೆ ಆರಂಭಿಕ 51 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ ಸೂರ್ಯಕುಮಾರ್ ಕರ್ನಾಟಕದ ದಾಳಿಗೆ ತಡೆಗೋಡೆಯಾಗಿ ನಿಲ್ಲುವ ಪ್ರಯತ್ನ ನಡೆಸಿದರು. ಅಂತಿಮವಾಗಿ 119 ಎಸೆತಗಳಲ್ಲಿ 36 ರನ್ ದಾಖಲಿಸಿದ ನಂತರ ಮಿಥುನ್ ಬೌನ್ಸ್‍ಗೆ ನಲುಗಿ ವಿಕೆಟ್ ಒಪ್ಪಿಸಿದರು.ನಿಖಿಲ್ ಖಾತೆ ತೆರೆಯುವ ಮುನ್ನವೇ ವಿನಯ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಎರಡನೇ ಅವ„ ಅಂತ್ಯದ ವೇಳೆ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದು, ತಂಡದ ಹಿನ್ನಡೆಗೆ ಕಾರಣವಾಯಿತು. ದಿನದಾಟದ ಅಂತಿಮ ಅವಧಿಯಲ್ಲಿ 24 ಓವರ್‍ಗಳಲ್ಲಿ ಕೇವಲ 40 ರನ್ ಗಳಿಸಿದ ಮುಂಬೈ ಮಂದಗಿಯ ಬ್ಯಾಟಿಂಗ್ ನಡೆಸಿತು. ಕ್ರೀಸ್‍ನಲ್ಲಿ ನಿಂತು ಆಡಿದ ಸಿದ್ದೇಶ್ ಲಾಡ್ 41 ಹಾಗೂ ಅಭಿಷೇಕ್ 2 ರನ್ ಗಳಿಸಿ ಆಟ ಕಾಯ್ದಿರಿಸಿದ್ದಾರೆ.

ಮಿಂಚಿದ ಮಿಥುನ್: ಕರ್ನಾಟಕ ತಂಡದ ಪರ ಮಾರಕ ದಾಳಿ ನಡೆಸಿದ ಮಿಥುನ್, ಮುಂಬೈ ಬ್ಯಾಟ್ಸ್‍ಮನ್‍ಗಳ ಪಾಲಿಗೆ ಸವಾಲಾಗಿ ನಿಂತರು. ಅದ್ಭುತ ಬೌನ್ಸ್ ಎಸೆತಗಳನ್ನು ಪ್ರಯೋಗಿಸಿದ ಮಿಥುನ್, ಮುಂಬೈನ ಅಗ್ರ ಮೂವರು ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿದರು. ಮಿಥುನ್ 3 ವಿಕೆಟ್ ಕಬಳಿಸಿದರೆ, ವಿನಯ್, ಶ್ರೇಯಸ್ ಹಾಗೂ ಅರವಿಂದ್ ತಲಾ 1 ವಿಕೆಟ್ ಕಬಳಿಸಿದರು.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನಿಂಗ್ಸ್ 202

ಮುಂಬೈ ಮೊದಲ ಇನಿಂಗ್ಸ್ 44

ಕರ್ನಾಟಕ ಎರಡನೇ ಇನಿಂಗ್ಸ್ 286

ಮುಂಬೈ ಎರಡನೇ ಇನಿಂಗ್ಸ್ 9 ವಿಕೆಟ್‍ಗೆ 332

No Comments

Leave A Comment