Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಗ್ರಾಹಕರಿಗೆ ಗುಡ್ ನ್ಯೂಸ್: ಲ್ಯಾಂಡ್ ಲೈನ್, ಮೊಬೈಲ್ ದರ ಭಾರೀ ಇಳಿಕೆ

ನವದೆಹಲಿ: ಲ್ಯಾಂಡ್ ಲೈನ್ ಮತ್ತು ಮೊಬೈಲ್ ಕರೆಗಳ ದರದಲ್ಲಿ ಭಾರೀ ಇಳಿಕೆ ಮಾಡಲು ಟೆಲಿಕಾಂ ರೆಗ್ಯುಲೇಟರಿ ಆಥೋರಿಟಿ ಆಫ್ ಇಂಡಿಯಾ(ಟ್ರಾಯ್) ಶಿಫಾರಸು ಮಾಡಿರುವುದು ಗ್ರಾಹಕರಿಗೆ ಭರ್ಜರಿ ಖುಷಿ ಕೊಡುವುದರಲ್ಲಿ ಅನುಮಾನವಿಲ್ಲ.

ಹೌದು ಟ್ರಾಯ್ ನ ಈ ನಡೆ ನಿಜಕ್ಕೂ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಗ್ರಾಹಕರಿಗೆ ಅನುಕೂಲವಾಗಲಿದೆ. ಲ್ಯಾಂಡ್ ಲೈನ್, ಮೊಬೈಲ್ ಕರೆಯ ದರ ಭಾರೀ ಇಳಿಕೆ ಮಾಡಲಿದೆ.

ದರ ಎಷ್ಟು ಕಡಿಮೆಯಾಗಲಿದೆ:
ಟ್ರಾಯ್ ಟಾರಿಫ್ ಪ್ರಕಾರ, ಸ್ಥಳೀಯ ಮತ್ತು ನ್ಯಾಷನಲ್ ಕರೆಗಳಿಗೆ ಮೊಬೈಲ್ ಟು ಮೊಬೈಲ್ ಗೆ ಈ ಮೊದಲು ನಿಮಿಷಕ್ಕೆ 20 ಪೈಸೆ ಇದ್ದು, ಇನ್ಮುಂದೆ 14ಪೈಸೆಯಾಗಲಿದೆ. ಮೊಬೈಲ್ ಟು ಲ್ಯಾಂಡ್ ಲೈನ್ ಈ ಮೊದಲು ನಿಮಿಷಕ್ಕೆ 20 ಪೈಸೆ ಇದ್ದು, ಇನ್ಮುಂದೆ ಉಚಿತ. ಲ್ಯಾಂಡ್ ಲೈನ್ ಟು ಲ್ಯಾಂಡ್ ಲೈನ್ ಕರೆಗೆ ಈ ಮೊದಲು ನಿಮಿಷಕ್ಕೆ 20 ಪೈಸೆ ಇದ್ದು, ಇನ್ಮುಂದೆ ಉಚಿತ. ಲ್ಯಾಂಡ್ ಲೈನ್ ಟು ಮೊಬೈಲ್ ಗೆ ಈ ಮೊದಲು 20 ಪೈಸೆ ಇದ್ದು, ಇನ್ಮುಂದೆ ಉಚಿತವಾಗಲಿದೆ.

ಪ್ರತಿ ಬಾರಿಯ ಇಂಟರ್ ಕನೆಕ್ಷನ್ ದರವನ್ನು ಕಡಿತ ಮಾಡಲು ಟ್ರಾಯ್ ನಿರ್ಧರಿಸಿರುವುದು ಕೂಡಾ ಗ್ರಾಹಕರಿಗೆ ಲಾಭವಾಗಲಿದೆ. ಬಿಎಸ್ಎನ್ಎಲ್ ದೇಶದಲ್ಲಿಯೇ ಅತಿ ಹೆಚ್ಚು ಲ್ಯಾಂಡ್ ಲೈನ್ ಗ್ರಾಹಕರನ್ನು ಹೊಂದಿದೆ. ನಾವು ಈ ಅನುಕೂಲವನ್ನು ಗ್ರಾಹಕರಿಗೆ ಏಪ್ರಿಲ್ ತಿಂಗಳಿನಿಂದಲೇ ಮಾಡಿಕೊಡಲಿದ್ದೇವೆ ಎಂದು ಬಿಎಸ್ಎನ್ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.


ಬಿಎಸ್ಎನ್ಎಲ್ ದೇಶದಲ್ಲಿ ಸುಮಾರು 1.7 ಕೋಟಿ ಲ್ಯಾಂಡ್ ಲೈನ್ ಗ್ರಾಹಕರನ್ನು ಹೊಂದಿದೆ. ಅಲ್ಲದೇ ಟ್ರಾಯ್ ನ ಪ್ರಸ್ತಾವಿತ ದರದ ಪಟ್ಟಿಯ ಜಾರಿಗಾಗಿ ನಾವು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಬಿಎಸ್ಎನ್ಎಲ್ ಹೇಳಿದೆ.

No Comments

Leave A Comment