Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕೊರಗ ಸಮುದಾಯದ ಮಾನವ ಸಂಪನ್ಮೂಲ ಅಭಿವೃದ್ಧಿಯ ನಿರ್ಲಕ್ಷದ ಆರೋಪ: ಉಡುಪಿ ಜಿಲ್ಲಾಡಳಿತದ ವಿರುದ್ಧ ಕೊರಗರ ಮುಷ್ಕರ

ಉಡುಪಿ, ಫೆ.23: ಕೊರಗ ಸಮುದಾಯದ ಮಾನವ ಸಂಪನ್ಮೂಲ ಅಭಿ ವೃದ್ಧಿಯನ್ನು(ಶಿಕ್ಷಣ, ಆರೋಗ್ಯ) ಜಿಲ್ಲಾಡಳಿತ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂ ಟದ ನೇತೃತ್ವದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಮುಷ್ಕರಕ್ಕೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಾಲನೆ ನೀಡಲಾಯಿತು.

ಅಳಿವಿನಂಚಿನಲ್ಲಿರುವ ಕೊರಗ ಸಮುದಾಯಕ್ಕೆ ಕೇಂದ್ರ ಸರಕಾರವು 2008ರಲ್ಲಿ ಕನ್ಝ್‌ರ್ವೆಶನ್ ಹಾಗೂ ಡೆವಲಪ್‌ಮೆಂಟ್ ಯೋಜನೆಯಡಿ ಕೋಟ್ಯಂತರ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಕೊರಗರ ಮಾನವ ಸಂಪನ್ಮೂಲ ಅಭಿವೃದ್ಧಿಗೆ ವಿಶೇಷ ಗಮನ ಕೊಡಬೇಕೆಂಬ ಉದ್ದೇಶದಿಂದ ತಯಾರಿಸಲಾಗಿದ್ದರೂ ಅದು ಈವರೆಗೂ ಅನುಷ್ಠಾನ ಗೊಂಡಿಲ್ಲ್ಲ ಎಂದು ಧರಣಿನಿರತರು ಆರೋಪಿಸಿದರು.
ಐಟಿಡಿಪಿ ಇಲಾಖೆಯು ಇದನ್ನು ಮೂಲಸೌಲಭ್ಯ ಸೃಷ್ಟಿ ಮತ್ತು ನಿರ್ವ ಹಣೆಗೆ ಮಾತ್ರ ಸೀಮಿತಗೊಳಿಸದೆ ಮಾನವ ಅಭಿವೃದ್ಧಿಗೆ ವಿಸ್ತರಿಸಿದೆ. ಆದರೆ ಅದನ್ನು ಅರ್ಥೈಸುವ ಮತ್ತು ಅನುಷ್ಠಾನಗೊಳಿಸುವ ಕ್ರಮ ಇನ್ನೂ ಆರಂಭಗೊಂಡಿಲ್ಲ. 2008ರಿಂದಲೂ ಈ ವಿಚಾರವನ್ನು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪ್ರಸ್ತಾಪಿಸುತ್ತಲೇ ಬರು ತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ದೂರಿದರು.
ಕೊರಗರ ಬೇಡಿಕೆಗಳು: ಹಾಡಿ ಮಟ್ಟದಲ್ಲಿ ಮಕ್ಕಳ ಶಿಕ್ಷಣ ಜಾಗೃತಿ ಅಭಿಯಾನ, ವರ್ಷಕ್ಕೆ ಎರಡು ಬಾರಿ ಶಾಲಾ ಮಕ್ಕಳ ಸೇರ್ಪಡೆ ಆಂದೋಲನ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಅಭಿಯಾನ, ಪ್ರತಿ ಶಾಲೆಯಲ್ಲಿ 3 ತಿಂಗಳಿಗೊಮ್ಮೆ ಮಕ್ಕಳ ಪ್ರಗತಿ ಪರಿಶೀಲನೆ, ಕೊಗರ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಿಳುವಳಿಕೆಯ ಬಗ್ಗೆ ಶಿಕ್ಷಕರಿಗೆ ತರಬೇತಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ, ಹಾಡಿಯಲ್ಲಿ ಟ್ಯೂಶನ್ ಕೇಂದ್ರಗಳ ಆರಂಭ, ಪ್ರತಿ ತಾಲೂಕಿನಲ್ಲಿ ಕೊಗರ ಮಕ್ಕಳ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಪ್ತ ಸಮಾ ಲೋಚಕರ ನೇಮಕ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ ಯಿಸಲಾಯಿತು.

ಆರೋಗ್ಯ ಸಮಸ್ಯೆ ಬಾರದಂತೆ ಮುಂಜಾಗೃತಾ ಕ್ರಮ, ಸಮಗ್ರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ, ಕುಡಿತ ಮತ್ತು ದುಶ್ಚಟಗಳ ವಿರುದ್ಧ ಅಭಿಯಾನ, ದುಶ್ಚಟ ವಿಮುಕ್ತಿ ಶಿಬಿರ, ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ, ಕೊರಗ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಿ ನೇಮಕ ಸೇರಿದಂತೆ ಆರೋಗ್ಯ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಯ ವರಿಗೆ ಸಲ್ಲಿಸಲಾದ ಮನವಿಯಲ್ಲಿ ಒಕ್ಕೂಟ ಆಗ್ರಹಿಸಿದೆ.

ಧರಣಿಯಲ್ಲಿ ಕೊರಗ ಜಿಲ್ಲಾ ಸಮಿ ತಿಯ ಅಧ್ಯಕ್ಷೆ ಶಶಿಕಲಾ ಸಚ್ಚರಿಪೇಟೆ, ಒಕ್ಕೂಟದ ಮಾಜಿ ಅಧ್ಯಕ್ಷೆ ಗೌರಿ ಕೆಂಜೂರು, ಒಕ್ಕೂಟದ ಜತೆ ಕಾರ್ಯದರ್ಶಿ ರಂಗ, ಉಪಾಧ್ಯಕ್ಷ ಬೊಗ್ರ ಕೊರಗ, ಕೋಶಾಧಿಕಾರಿ ವಿನಯ ಅಡ್ವೆ, ಗೀತಾ ಬಜಗೋಳಿ, ಸುಮಂಗಲ ಕೋಟ, ಪುತ್ರನ್ ಕೊರಗ ಹೆಬ್ರಿ, ಬೇಬಿ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು.

ಸಂಪೂರ್ಣ ಪಾನ ನಿಷೇಧ ಜಾರಿಗೆ ಆಗ್ರಹಬುಡಕಟ್ಟು ಸಮುದಾಯ ಸರಕಾ ರದ ಅಬಕಾರಿ ನೀತಿಯಿಂದ ಅತಿ ಹೆಚ್ಚು ಸಮಸ್ಯೆಗಳಿಗೆ ಒಳಗಾಗುತ್ತಿದೆ. ರಾಜ್ಯ ಸರಕಾರ ಶರಾಬನ್ನು ನಿಷೇಧಿ ಸಿದರೂ ಇತರ ಮದ್ಯದಂಗಡಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈಗ ವ್ಯಾಪಾರಿಗಳು ನೇರವಾಗಿ ಬುಡಕಟ್ಟು ಸಮುದಾಯದವರು ಇರುವ ಹಾಡಿಗೆ ಮದ್ಯ ತಂದು ಮಾರಾಟ ಮಾಡುತ್ತಿದ್ದಾರೆ. ಇದನ್ನು ಸರಕಾರ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಒಕ್ಕೂಟ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಯವರಿಗೆ ಸಲ್ಲಿಸಿದ ಮನವಿ ಯಲ್ಲಿ ಒತ್ತಾಯಿಸಿದೆ.

ಸರಕಾರ ಯಾವುದೇ ಕಾರಣಕ್ಕೂ ಹೊಸ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು. ಬದ ಲಾಗಿ ಹಂತಹಂತವಾಗಿ ಪಾನ ನಿಷೇಧವನ್ನು ಜಾರಿಗೆ ತಂದು ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಪಾನ ನಿಷೇಧ ಮಾಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಭರವಸೆ: ಮುಷ್ಕರ ಅಂತ್ಯ
ಬೇಡಿಕೆ ಈಡೇರಿಸುವಂತೆ ಅನಿರ್ದಿಷ್ಟಾವಧಿ ಧರಣಿ ಮುಷ್ಕರ ಆರಂಭಿಸಿದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು ಸಂಜೆ ವೇಳೆಗೆ ಜಿಲ್ಲಾಧಿಕಾರಿ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿತು. ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಧರಣಿ ನಡೆಸಿದ ಕೊರಗರು ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮುಂದಿನ 15 ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೊರಗರ ಸಭೆ ಕರೆದು ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

No Comments

Leave A Comment