Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಭೂ ಸ್ವಾಧೀನ ವಿರುದ್ಧದ ಅಣ್ಣಾ ಆಂದೋಲನಕ್ಕೆ ಅಸ್ಸಾಂ ಸರಕಾರದ ಬೆಂಬಲ

ಗುವಾಹಟಿ: ಕೇಂದ್ರದ ಭೂಸ್ವಾಧೀನ ಅಧ್ಯಾದೇಶಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿರುವ ಅಸ್ಸಾಂ ಸರಕಾರ, ಈ ಅಧ್ಯಾದೇಶದ ವಿರುದ್ಧ ದಿಲ್ಲಿಯಲ್ಲಿ ಜನಾಂದೋಲನ ಆರಂಭಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ತನ್ನ ಪೂರ್ಣ ಬೆಂಬಲವನ್ನು ಸೂಚಿಸಿದೆ.

ಅಸ್ಸಾಂ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಅವರು, ಕೇಂದ್ರದ ಜನ ವಿರೋಧಿ ಮತ್ತು ರೈತ ವಿರೋಧಿ ಕ್ರಮಗಳ ವಿರುದ್ಧ ಅಸ್ಸಾಂ ಸರಕಾರವು ಎಂದಿನಿಂದಲೂ ತನ್ನ ಪ್ರತಿಭಟನೆಯನ್ನು ತೋರುತ್ತಾ ಬಂದಿದೆ ಎಂದು ಹೇಳಿದ್ದಾರೆ.

ಕೇಂದ್ರವು ಹೊರಡಿಸಿರುವ ಭೂಸ್ವಾಧೀನ ಅಧ್ಯಾದೇಶವು ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದ್ದು ಅದು ಕೇವಲ ಸಿರಿವಂತರ, ಕೈಗಾರಿಕೋದ್ಯಮಿಗಳ ಮತು ಉಳ್ಳವರ ಹಿತಾಸಕ್ತಿಯನ್ನು ಮಾತ್ರವೇ ರಕ್ಷಿಸುವಂತಿದೆ ಎಂದು ಗೊಗೋಯ್‌ ಹೇಳಿದ್ದಾರೆ.

No Comments

Leave A Comment