Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್‌ಗೆ 119 ರನ್‌ಗಳ ಜಯ

ಕ್ರಿಸ್ಟ್‌ಚರ್ಚ್ : ವಿಶ್ವಕಪ್ ಪಂದ್ಯದಲ್ಲಿ ಸೋಮವಾರ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್‌ಗಳ ಗೆಲವು ಸಾಧಿಸಿದೆ. ಟಾಸ್ ಗೆದ್ದ ಸ್ಕಾಟ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂಗ್ಲೆಂಡ್‌ಗೆ ಅನುಕೂಲವಾಯಿತು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ಗೆ ಮೊಯಿನ್ ಅಲಿ ಮತ್ತು ಬೆಲ್ ಜತೆಯಾಟ ಉತ್ತಮ ಆರಂಭವನ್ನು ನೀಡಿತು. ಇವರಿಬ್ಬರೂ ಸೇರಿ 172 ರನ್ ಕಲೆಹಾಕಿದ್ದರು.  ಆರಂಭಿಕ ದಾಂಡಿಗ ಅಲಿ 128 ರನ್  ಗಳಿಸಿದರೆ ಬೆಲ್ 54 ರನ್ ಗಳಿಸಿದರು. ಬ್ಯಾರಿಂಗ್ಟನ್ ಬಾಲ್‌ಗೆ ಬೆಲ್ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದಾಗ ಅಲಿ ಜತೆಯಾದ್ದದು ಬಲ್ಲಾನ್. ಬೆಲ್ ಹೊರ ನಡೆದು ಮೂರು ಓವರ್‌ಗಳ ನಂತರ  ಅಲಿ ಕೂಡಾ ವಿಕೆಟ್ ಕಳೆದುಕೊಂಡರು. ಇಂಗ್ಲೆಂಡ್ ಪರವಾಗಿ  ಬಲ್ಲಾನ್ಸ್ (10), ರೂಟ್ (1), ಮೋರ್ಗನ್ (46), ಟೈಲರ್ (17). ಬಟ್ಲಪ್  (24). ವೋಕೆಸ್ (1), ಬ್ರೋಡ್  (0) ಹಾಗೂ ಫಿನ್ನ್ (1) ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 303 ರನ್‌ಗಳಿಸಿತ್ತು. ಈ ಮೊತ್ತವನ್ನು ಬೆನ್ನೆತ್ತಿದ ಸ್ಕಾಟ್ಲೆಂಡ್ 42.2 ಓವರ್‌ಗಳಲ್ಲಿ 184 ರನ್‌ಗಳಿಸಿ ಆಲೌಟ್ ಆಯ್ತು. ಈ ಮೂಲಕ ಇಂಗ್ಲೆಂಡ್ ಪ್ರಸ್ತುತ ವಿಶ್ವಕಪ್ ಪಂದ್ಯದಲ್ಲಿ ಮೊದಲ ಜಯ ಸಾಧಿಸಿದೆ.

ಸ್ಕಾಟ್ಲೆಂಡ್‌ನ ಕೆಯಲ್ ಕೋಯೆಟ್ಜರ್ (71) ಅತೀ ಹೆಚ್ಚು ರನ್ ಗಳಿಸಿ ತಮ್ಮ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದ್ದಾರೆ. ಆರಂಭದಲ್ಲಿ ಅಬ್ಬರಿಸಿದ ಕೆಯಲ್ ಮೋಯಿನ್ ಅಲಿಯ ಬಾಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಮರಳಿದಾಗ ನಂತರ ಬಂದ ಆಟಗಾರರು ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸ್ಕಾಟ್ಲೆಂಡ್ ಪರ ಮ್ಯಾಕ್‌ಲಿಯೋಡ್  (4), ಕೊಲೆಮೆನ್  (7), ಮಾಚನ್ (5), ಮೋಮ್ಸೆನ್  (26) ಬೆರ್ರಿಂಗ್ಟನ್ (8), ಕ್ರಾಸ್ (23), ಡಾವೇ (9), ಹಕ್ (15)  ಹಾಗೂ ಇವಾನ್ (9) ರನ್ ಗಳಿಸಿದ್ದಾರೆ.  ಕೊನೆಯ ಆಟಗಾರ ವಾರ್ಲಾವ್ ಎರಡು ಬಾಲ್‌ಗಳನ್ನೆದುರಿಸಿದರೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

No Comments

Leave A Comment