Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮಂಗಳೂರು ಬಂದರಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಾಣ

ನವದೆಹಲಿ: ಕರ್ನಾಟಕದ ನವಮಂಗಳೂರು ಬಂದರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರುವ 12 ಬಂದರುಗಳಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ಪ್ರತಿ ಬಂದರಿನಲ್ಲೂ ಒಂದೊಂದು ಸ್ಮಾರ್ಟ್‌ ಸಿಟಿ ನಿರ್ಮಾಣವಾಗಲಿದೆ. ಪ್ರತಿ ಸ್ಮಾಟ್‌ ಸಿಟಿ ನಿರ್ಮಾಣಕ್ಕೆ 3ರಿಂದ 4 ಸಾವಿರ ಕೋಟಿ ರೂ. ಖರ್ಚಾಗಲಿದೆ. ಒಟ್ಟಾರೆ 50 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದು ಎಂದು ತಿಳಿಸಿದ್ದಾರೆ.

ನವಮಂಗಳೂರು ಅಲ್ಲದೆ, ಕಾಂಡ್ಲಾ, ಮುಂಬೈ, ಜವಾಹರಲಾಲ್‌ ನೆಹರು ಪೋರ್ಟ್‌ ಟ್ರಸ್ಟ್‌, ಮರ್ಮುಗಾವ್‌, ಕೊಚ್ಚಿ, ವಿಶಾಖಪಟ್ಟಣ, ಪಾರಾದೀಪ್‌, ಕೋಲ್ಕತಾ ಬಂದರುಗಳಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಿಸಲಾಗುತ್ತದೆ. ಈ ಬಂದರುಗಳು ಒಟ್ಟಾರೆ 2.64 ಲಕ್ಷ ಎಕರೆ ಜಮೀನು ಹೊಂದಿವೆ. ಈ 12 ಬಂದರುಗಳು ದೇಶದ ಶೇ.61 ಜಲಸಾರಿಗೆಯ ಪಾಲು ಹೊಂದಿವೆ ಎಂದು ಗಡ್ಕರಿ ವಿವರಿಸಿದ್ದಾರೆ.

ಇನ್ನು 4ರಿಂದ 6 ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ. 5 ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ. ಜಿಪಿಎಸ್‌ ಮೂಲಕ ಜಮೀನು ಗುರುತಿಸಲಾಗುತ್ತದೆ ಯಾವುದೇ ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳಿಗೆ ಜಮೀನು ನೀಡದೆ, ಸರ್ಕಾರವೇ ಸ್ಮಾರ್ಟ್‌ ಸಿಟಿಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದರು. ಆದರೆ ಮನೆ ನಿರ್ಮಾಣವನ್ನು ಮಾತ್ರ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತದೆ ಎಂದರು.

ಅಲ್ಲಿ ಏನಿರುತ್ತೆ?

ಸ್ಮಾರ್ಟ್‌ ಸಿಟಿ ಮತ್ತು ಬಂದರುಗಳಲ್ಲಿ ಅಗಲವಾದ ರಸ್ತೆಗಳು, ಹಸಿರು ವಲಯ, ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯಗಳು, ವಿಶೇಷ ಆರ್ಥಿಕ ವಲಯ, ಹಡಗು ಒಡೆವ ಮತ್ತು ನಿರ್ಮಿಸುವ ಕೇಂದ್ರಗಳು ಇರಲಿವೆ. ಬಂದರಿನ ನೀರನ್ನು ಮರು ಶುದ್ಧೀಕರಿಸಲಾಗುತ್ತದೆ. ಬಂದರಿನ ತ್ಯಾಜ್ಯವನ್ನು ಮರುಸಂಸ್ಕರಣೆ ಮಾಡಲಾಗುತ್ತದೆ. ವಾಹನಗಳನ್ನು ಜೈವಿಕ ಇಂಧನ ಬಳಸಿ ಓಡಿಸಲಾಗುತ್ತದೆ. ಸೌರ ವಿದ್ಯುತ್‌ ಮತ್ತು ಪವನ ವಿದ್ಯುತ್ತನ್ನು ಬಂದರುಗಳಲ್ಲಿ ಉತ್ಪಾದಿಸಲಾಗುತ್ತದೆ. ಅಲ್ಲದೆ, ಬಂದರು ವಲಯದಲ್ಲಿ ಶಾಲೆ, ವಾಣಿಜ್ಯ ಮಳಿಗೆ ಮತ್ತು ಇತರ ಸವಲತ್ತುಗಳನ್ನು ನೀಡಲಾಗುತ್ತದೆ ಎಂದು ಗಡ್ಕರಿ ವಿವರಿಸಿದರು.

No Comments

Leave A Comment