Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು/World Cup 2015: India beats South Africa by 130 runs in Pool B game

ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಭಾನುವಾರ ಭರ್ಜರಿ ಗೆಲುವು ಸಾಧಿಸಿದೆ.

1992, 1999 ಮತ್ತು 2011ರಲ್ಲಿ ಈ ಮೂರು ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದ್ದ ಭಾರತಕ್ಕೆ ಸೋಲೇ ಗತಿಯಾಗಿತ್ತು. ಆದರೆ, ಈ ಬಾರಿ ಭಾರತ ವಿಶ್ವಕಪ್‌ನಲ್ಲಿ ಇತಿಹಾಸ ಬದಲಿಸುವ ಮೂಲಕ ಹರಿಣಗಳ ಗೆಲವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ, ಆರಂಭಿಕ ಆಟಗಾರ ಶಿಖರ್ ಧವನ್ (132 ರನ್) ಮತ್ತು ಅಜಿಂಕ್ಯ ರಹಾನೆ (79 ರನ್ )ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 307 ರನ್ ಗಳಿಸುವ ಮೂಲಕ ದ.ಆಫ್ರಿಕಾಗೆ 308 ರನ್ ಗಳ ಟಾರ್ಗೆಟ್ ನೀಡಿತು.

ಭಾರತದ ಬೃಹತ್ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಕೇವಲು 177ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು.

ಭಾರತದ ಮೊತ್ತ 9 ರನ್‌ಗಳಾಗಿದ್ದ ವೇಳೆ ರೋಹಿತ್‌ ಶರ್ಮಾ ಅವರು ರನ್‌ ಔಟ್‌ಗೆ ಬಲಿಯಾಗುವ ಮೂಲಕ ತಂಡ ಆರಂಭಿಕ ಆಘಾತ ಎದುರಿಸುವಂತಾಯಿತು. ಆದರೆ ಆ ಬಳಿಕ ಜೊತೆಗೂಡಿದ ಶಿಖರ್‌ ಧವನ್‌ ಮತ್ತು ವಿರಾಟ್ ಕೊಹ್ಲಿ ಜೋಡಿ ತಾಳ್ಮೆಯ ಆಟವಾಡಿ ಭಾರತವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಮೋಘ ಶತಕದ ಜೊತೆಯಾಟ ಆಡಿದ ಈ ಜೋಡಿಯನ್ನು ದ.ಆಫ್ರಿಕಾದ ಇಮ್ರಾನ್ ತಾಹಿರ್ ಅವರು ಬೇರ್ಪಡಿಸಿದರು.

46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಕೊಹ್ಲಿ ಡುಪ್ಲಿಸಿಸ್ ಅವರಿಗೆ ಕ್ಯಾಚ್ ನೀಡಿ ಹೊರ  ನಡೆದರು.ಬಳಿಕ ಕ್ರೀಸ್ ಗೆ ಆಗಮಿಸಿದ ರಹಾನೆ-ಶಿಖರ್ ಧವನ್ ಜೊತೆಗೂಡ ತಂಡದ ಮೊತ್ತವನ್ನು ಹಿಗ್ಗಿಸಿದರು. ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ನಿರ್ಧಾಕ್ಷೀಣ್ಯವಾಗಿ ದಂಡಿಸಿದ ಈ ಜೋಡಿ ಶತಕದ ಜೊತೆಯಾಟ ನೀಡಿತು. ಅಂತಿಮವಾಗಿ ಪಂದ್ಯದ 44ನೇ ಓವರ್ ನಲ್ಲಿ ಶತಕ ಸಿಡಿಸಿ ಆಟವಾಡುತ್ತಿದ್ದ ಶಿಖರ್ ಧವನ್ ಪಾರ್ನೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಬಳಿಕ ಬಂದ ಯಾವುದೇ ಆಟಗಾರರೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಟವಾಡಲಿಲ್ಲ. ಇನ್ನಿಂಗ್ಸ್ ಅಂತಿಮ ಓವರ್ ಗಳಾದ್ದರಿಂದ ಎಲ್ಲರೂ ಹೊಡಿಬಡಿ ಆಟಕ್ಕೆ ಮುಂದಾದರು. ಇದರಿಂದಾಗಿ ಭಾರತದ ಕೊನೆಯ ಕ್ರಮಾಂಕದ ಆಟಗಾರರು ಬೇಗ ಬೇಗನೇ ಪೆವಿಲಿಯನ್ ಸೇರಬೇಕಾಯಿತು. ಧೋನಿ (18 ರನ್), ಸುರೇಶ್ ರೈನಾ (6 ರನ್), ರವೀಂದ್ರ ಜಡೇಜಾ (2 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲೇ 79 ರನ್ ಗಳಿಸಿದ್ದ ರಹಾನೆ ಕೂಡ ಸ್ಟೇಯ್ನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಅಂತಿಮವಾಗಿ ಭಾರತದ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 307 ರನ್ ಕಲೆಹಾಕಿತು.ದಕ್ಷಿಣ ಆಫ್ರಿಕಾ ತಂಡದ ಪರ ಸ್ಟೇಯ್ನ್ 2 ವಿಕೆಟ್, ಮಾರ್ಕೆಲ್, ಇಮ್ರಾನ್ ತಾಹಿರ್ ಮತ್ತು ಪಾರ್ನೆಲ್ ತಲಾ ಒಂದು ವಿಕೆಟ್ ಕಬಳಿಸಿದರು.

Melbourne:  Shikhar Dhawan smashed a rollicking 137 as India rode on a clinical display to break their World Cup jinx against South Africa with an emphatic 130-run victory in a group B match here today.

Dhawan’s career-best 137 propelled India to a comfortable 307 for seven before the bowlers performed brilliantly to bundle out the Proteas for 177 in 40.2 overs in what turned out to be a rather lopsided contest at the packed Melbourne Cricket Ground.

This was India’s maiden World Cup win against South Africa after having lost the clashes in 1992, 1999 and 2011.With two wins from as many matches, India now have a very good chance of qualifying for the quarterfinals as group leaders.

It was yet another commendable show by the Indians, who came into the tournament with a string of poor results in the tri-series preceding the mega-event.
Mohit Sharma (2/31 in 7 overs), Ravichandran Ashwin (3/41 in 10 overs) and Mohammed Shami (2/30 in 8 overs) kept the opposition batsmen under tight leash for better part of the innings.

The bowling unit fired in unison as South Africa never recovered once skipper AB de Villiers (30) fell short of his crease with Mohit’s accurate throw on top of the stumps sending the destructive player back in the pavilion.

De Villiers and Du Plessis were going strong at one stage adding 68 runs for the third wicket as South Africa reached 108 for two before the skipper got run-out.

Du Plessis (55) tried his best to stem the rot but once he mistimed a pull-shot off Mohit to Dhawan at covers, it was just a mere formality for the ‘Men In Blue’, who hardly put a foot wrong in front of the 86,786 crowd of which at least 75,000 were Indian supporters.

With Sachin Tendulkar cheering them from the stands, it was an electric atmosphere at the MCG as Dhoni’s men cantered home in style. The Indian dressing room erupted in joy and the players hugged each other after last man stading Imran Tahir was trapped LBW by Ravindra Jadeja.

No Comments

Leave A Comment