Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಎಎಪಿ ಇಬ್ಬರು ಶಾಸಕರ ವಿರುದ್ಧ ಎಫ್‌ಐಆರ್

ನವದೆಹಲಿ: ಪೊಲೀಸರ ಜೊತೆ ಘರ್ಷಣೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ(ಎಎಪಿ) ಇಬ್ಬರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬುರಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜತೆ ಘರ್ಷಣೆ ನಡೆಸಿದ ಎಎಪಿ ಶಾಸಕರಾದ ಸಂಜೀವ್ ಝಾ ಹಾಗೂ ಮಾಡಲ್ ಟೌನ್‌ನ ಅಖಿಲೇಶ್ ಪಿ.ತ್ರಿಪಾಠಿ ಹಾಗೂ ಅವರ ಬೆಂಬಲಿಗರು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದ, 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಎಪಿಯ ಶಾಸಕರನ್ನು ಬಂಧಿಸಿಲ್ಲವಾದರೂ, ಎಫ್‌ಐಆರ್‌ನಲ್ಲಿ ಅವರ ಹೆಸರಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪ್ರಧಾನ್ ಎನ್‌ಕ್ಲೇವ್ ಕಾಲೋನಿಯಿಂದ ಬಾಲಕನೊಬ್ಬನನ್ನು ಅಪಹರಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಹಿಡಿದು ಕರೆತಂದಿದ್ದು ಎಎಪಿ ಕಾರ್ಯಕರ್ತರು, ಝಾ ಅವರ ಜತೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ನಂತರ ತ್ರಿಪಾಠಿ ಸಹ ಅವರ ಬೆಂಬಲಿಗರೊಂದಿಗೆ ಅಲ್ಲಿಗೆ ಬಂದರು. ಬುರಾರಿ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ರಾತ್ರಿ ಕಾರು ನಿಲ್ಲಿಸಲು ಅವಕಾಶ ನೀಡಿದ ಹಿನ್ನೆಲೆ ಶುರುವಾದ ಗಲಾಟೆ ಬಡಿದಾಟದಲ್ಲಿ ಅಂತ್ಯವಾಗಿದೆ.

No Comments

Leave A Comment