Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ದೊಡ್ಡವರ ಬಣ್ಣ ಬಯಲು ಮಾಡಿ: ಕೇಜ್ರಿವಾಲ್- ಕಾರ್ಪೋರೇಟ್ ಬೇಹುಗಾರಿಕೆ ಪ್ರಕರಣ: ಮತ್ತೆ ಐವರ ಬಂಧನ

ನವದೆಹಲಿ: ಕಾರ್ಪೋರೇಟ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಪ್ರಕರಣದ ಹಿಂದಿರುವ ದೊಡ್ಡವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

 ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್ ಅವರು, ದೆಹಲಿ ಪೊಲೀಸರ ಮಿಂಚಿನ ಕಾರ್ಯಚರಣೆ ಶ್ಲಾಘನಾರ್ಹವಾಗಿದ್ದು, ಪೊಲೀಸರು ಪ್ರಕರಣದ ಹಿಂದಿರುವ ದೊಡ್ಡವರ ವಿರುದ್ಧ ಕ್ರಮ ಕೊಗೊಳ್ಳಬೇಕು ಎಂದು ಟ್ವೀಟಿಸಿದ್ದಾರೆ.

ಪೆಟ್ರೋಲಿಯಂ ಇಲಾಖೆಯ ರಹಸ್ಯ ಮಾಹಿತಿಗಳನ್ನು ಬಹಿರಂಗ ಪಡಿಸಿದ ಕಾರ್ಪೋರೇಟ್ ಬೇಹುಗಾರಿಕಾ ಪ್ರಕರಣ ದಿನಕ್ಕೊಂದು ತಿರುವು ಈ ಹಿಂದೆ ಇದೇ ಪ್ರಕರಣದ ಸಂಬಂಧ ದೆಹಲಿ ಪೊಲೀಸರು 7 ಮಂದಿಯನ್ನು ಬಂಧಿಸಿದ್ದರು. ಇದೀಗ ಮತ್ತೆ ಇಂದು 5 ಮಂದಿಯನ್ನು ಬಂಧಿಸಿರುವ ದೆಹಲಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಂಧಿತರೆಲ್ಲರೂ ಪ್ರಮುಖ ತೈಲ ಕಂಪನಿಗಳ ಸಿಬ್ಬಂದಿಗಳು ಎಂದು ತಿಳಿದುಬಂದಿದ್ದು, ಎಸ್‌ಕೆ ಕಂಪೆನಿಯ ವಿನಯ್ ಕುಮಾರ್, ಕೇಮ್ಸ್ ನ ಕೆ ನಾಯಕ್, ಆರ್‌ಐಎಲ್‌ನ ಶೈಲೇಶ್ ಸಕ್ಸೇನಾ, ಜುಬಲೇಟ್ ಎನರ್ಜಿಯ ಸುಭಾಶ್ ಚಂದ್ರ ಹಾಗೂ ರಿಷಿ ಆನಂದ್ ಎಂದು ಗುರುತಿಸಲಾಗಿದೆ. ಬಂಧಿತರು ಕೇವಲ ಪೆಟ್ರೋಲಿಯಂ ಇಲಾಖೆಯ ಮಾಹಿತಿಗಳನ್ನಷ್ಟೇ ಅಲ್ಲದೇ ವಿತ್ತ ಇಲಾಖೆ, ಇಂಧನ ಮತ್ತು ಕಲ್ಲಿದ್ದಲು ಇಲಾಖೆಯ ಪ್ರಮುಖ ದಾಖಲೆಗಳನ್ನು ಕೂಡ ಸೋರಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಇದೇ ಫೆಬ್ರವರಿ 23ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲಿರುವ ಬಜೆಟ್ ಭಾಷಣದ ಪ್ರತಿಗಳು ಕೂಡ ಸೋರಿಕೆಯಾಗಿರುವುದು ತಿಳಿದುಬಂದಿದೆ. ಅಲ್ಲದೆ  ದೆಹಲಿ ಪೊಲೀಸರು ಬಂಧಿತರಿಂದ 3 ಡೈರಿಗಳನ್ನು ವಶಪಡಿಸಿಕೊಂಡಿದ್ದು, ಈ ಡೈರಿಯಲ್ಲಿ ಪ್ರಮುಖರ ಹೆಸರುಗಳನ್ನು ಮತ್ತು ದೂರವಾಣಿ ಸಂಖ್ಯೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳು ನಮೂದಾಗಿವೆ ಎಂದು ತಿಳಿದುಬಂದಿದೆ.

ಪ್ರಸ್ತುತ ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಫೆ23ರವರೆಗೂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

No Comments

Leave A Comment