Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಶಿವಮೊಗ್ಗ ಪ್ರಕ್ಷುಬ್ಧ , ಇಂದು ಬಂದ್‌

ಶಿವಮೊಗ್ಗ: ಪಿಎಫ್‌ಐ ಸಂಘಟನೆ ಗುರುವಾರ ಆಯೋಜಿಸಿದ್ದ ಏಕತಾ ರ್ಯಾಲಿ ವೇಳೆ ನಡೆದ ಗಲಭೆಯಿಂದ ತತ್ತರಿಸಿದ್ದ ಶಿವಮೊಗ್ಗದಲ್ಲಿ ಶುಕ್ರವಾರ ಕೂಡ ಹಿಂಸಾಕೃತ್ಯಗಳು ಮರುಕಳಿಸಿವೆ. ನಗರದ ವಿವಿಧೆಡೆ ವಾಹನ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿ ಮುಂದುವರಿದಿದೆ.

ಈ ಮಧ್ಯೆ, ಗುರುವಾರದ ಹಿಂಸಾಚಾರ ಖಂಡಿಸಿ ಹಿಂದೂ ಪರ ಸಂಘಟನೆಗೆಳು ಶನಿವಾರ ಶಿವಮೊಗ್ಗ ನಗರ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಶನಿವಾರವೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಾವುದೇ ಅಹಿತ ಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಫೆ.25ರವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ.

ಗುರುವಾರದ ಹಿಂಸಾಚಾರದಲ್ಲಿ ಮೃತಪಟ್ಟ ವಿಶ್ವನಾಥ ಶೆಟ್ಟಿಯವರ ಶವಯಾತ್ರೆ ಶುಕ್ರವಾರ ಮಧ್ಯಾಹ್ನದ ಬಳಿಕ ನಡೆಯಿತು. ಈ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧ ಗೊಂಡಿತು. ಕಾಂಗ್ರೆಸ್‌ ಕಚೇರಿ ಸೇರಿದಂತೆ ಹಲವು ಕಡೆ ಕಲ್ಲು ತೂರಾಟ ನಡೆಯಿತು. ಗುಂಪುಗಳನ್ನು  ಚದುರಿ ಸಲು ಪೊಲೀಸರು ಹಲವು ಬಾರಿ ಲಾಠಿ ಪ್ರಹಾರ ನಡೆಸಬೇಕಾಯಿತು.

ಶುಕ್ರವಾರ ಸಹ ಇಡೀ ನಗರ ಅಘೋಷಿತ ಕರ್ಫ್ಯೂ ವಿಧಿಸಿದ ಪರಿಸ್ಥಿತಿಯಲ್ಲಿತ್ತು. ಗಾಂಧಿ ಬಜಾರ್‌, ನೆಹರೂ ರಸ್ತೆ, ಬಿ.ಎಚ್‌. ರಸ್ತೆ, ದುರ್ಗಿಗುಡಿ ಸೇರಿದಂತೆ ಪ್ರಮುಖ ವ್ಯಾಪಾರಿ ಕೇಂದ್ರಗಳಿರುವ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರೇ ಬಲವಂತವಾಗಿ ಮುಚ್ಚಿಸಿದರು. ಇದರಿಂದ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ಆಟೋ ಮತ್ತು ಬಸ್‌ ಸಂಚಾರ ಕೂಡ ಕಡಿಮೆ ಇತ್ತು. ಮಧ್ಯಾಹ್ನದ ಬಳಿಕ ಬಹುತೇಕ ರಸ್ತೆಗಳು ಬಿಕೊ ಎನ್ನುತ್ತಿದ್ದವು.

ಮತ್ತೆ ಆರಂಭವಾದ ಹಿಂಸಾಚಾರ: ಬೆಳಗ್ಗೆ ಶಾಂತವಾಗಿದ್ದ ನಗರದಲ್ಲಿ 11 ಗಂಟೆ ಬಳಿಕ ಅಹಿತಕರ ಘಟನೆಗಳು ಆರಂಭಗೊಂಡವು. ಮೊದಲು ಗಾಂಧಿ ಬಜಾರ್‌ನಲ್ಲಿ ಕಲ್ಲು ತೂರಾಟ ಶುರುವಾಯಿತು. ಅಂಗಡಿಯೊಂದಕ್ಕೆ ಬೆಂಕಿ ಹಚ್ಚುವ ಪ್ರಯತ್ನವೂ ನಡೆಯಿತು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದರು. ನಿಧಾನವಾಗಿ ಈ ರೀತಿ ಘಟನೆಗಳು ಅಲ್ಲಲ್ಲಿ ಆರಂಭಗೊಂಡವು. ವಿನೋಬ ನಗರದಲ್ಲಿ ಲಾರಿಯೊಂದರ ಮೇಲೆ ಕಲ್ಲು ತೂರಲಾಯಿತು. ಕುಂಬಾರಗುಂಡಿ ಬಡಾವಣೆಯಲ್ಲಿ ಬೈಕ್‌ವೊಂದಕ್ಕೆ ಬೆಂಕಿ ಹಚ್ಚಲಾಯಿತು. ಗಾಂಧಿ ಬಜಾರ್‌ನ ಬಸವೇಶ್ವರ ದೇವಾಲಯದ ಬಳಿ ಬೈಕ್‌ವೊಂದಕ್ಕೆ ಬೆಂಕಿ ಹಚ್ಚಲು ಯತ್ನಿಸಲಾಯಿತು.

ಶವಯಾತ್ರೆ:  ಪರಿಸ್ಥಿತಿ ಹೀಗಿರುವಾಗಲೇ ಗುರುವಾರ ನಡೆದ ಘಟನೆಯಲ್ಲಿ ಮೃತಪಟ್ಟಿದ್ದ ವಿಶ್ವನಾಥ ಶೆಟ್ಟಿ ಶವದ ಅಂತ್ಯಕ್ರಿಯೆಯನ್ನು ರೋಟರಿ ಚಿತಾಗಾರದಲ್ಲಿ ನಡೆಸಲು ನಿರ್ಧರಿಸಲಾಯಿತು. ಮಧ್ಯಾಹ್ನ 12ರ ವೇಳೆ, ಆಲ್ಕೋಳದ ಅವರ ಮನೆಯಿಂದ ಪಾರ್ಥಿವ ಶರೀರದ ಯಾತ್ರೆ ಆರಂಭಗೊಂಡಿತು. ಶವಯಾತ್ರೆ ಸಾಗರ ರಸ್ತೆ ಪ್ರವಾಸಿ ಮಂದಿರದ ಬಳಿ ಬರುತ್ತಿದ್ದಂತೆ ಬೈಕ್‌ ಸವಾರನ ಜತೆ ಮೆರವಣಿಗೆಯಲ್ಲಿದ್ದ ಕೆಲವು ಯುವಕರು ಮಾತಿನ ಚಕಮಕಿ ನಡೆಸಿದರು. ಅನಂತರ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟರು. ಮೆರವಣಿಗೆ ಮುಂದೆ ತೆರಳುತ್ತಿದ್ದಂತೆ ಪ್ರವಾಸಿ ಮಂದಿರ, ಕುವೆಂಪು ನಗರಗಳಲ್ಲಿನ ಹಲವು ತಳ್ಳು ಗಾಡಿಗಳು, ಹಣ್ಣಿನ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ, ಪೊಲೀಸರು ಹಾಗೂ ಮೆರವಣಿಗೆಯಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮೇಲೆಯೇ ಕೆಲವರು ಹಲ್ಲೆಗೆ ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಕಾಂಗ್ರೆಸ್‌ ಕಚೇರಿಗೂ ಬಿತ್ತು ಕಲ್ಲು:  ಬಳಿಕ, ಮಹಾವೀರ ವೃತ್ತದಲ್ಲಿ ಮೆರವಣಿಗೆ ಇದ್ದ ವೇಳೆ ಗುಂಪೊಂದು ಕಾಂಗ್ರೆಸ್‌ ಕಚೇರಿ ಮೇಲೆ ಕಲ್ಲು ತೂರಿ ಗಾಜುಗಳನ್ನು ಪುಡಿಗಟ್ಟಿತು. ಇದೇ ವೇಳೆ ಪ್ರಾರ್ಥನಾ ಮಂದಿರವೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಪೊಲೀಸರು ಮತ್ತೆ ಲಾಠಿ ಪ್ರಹಾರ ನಡೆಸಿ ಕಿಡಿಗೇಡಿಗಳನ್ನು ಚದುರಿಸಿದರು.
ಅಂತಿಮವಾಗಿ ಗಲಾಟೆ ನಡುವೆಯೇ ಮೃತದೇಹ ರೋಟರಿ ಚಿತಾಗಾರ ಪ್ರವೇಶಿಸಿತು.
ಕಲ್ಲು ತೂರಾಟದಲ್ಲಿ ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮಣ್‌ ಗುಪ್ತಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಎಸ್‌. ನಾಯ್ಕ ಸೇರಿದಂತೆ ಹಲವು ಪೊಲೀಸರು ಗಾಯಗೊಂಡರು.

ಇಂದು ಬಂದ್‌ಗೆ ಕರೆ:
ಈ ಮಧ್ಯೆ, ಗುರುವಾರದ ಹಿಂಸಾಚಾರ ಖಂಡಿಸಿ, ಹಿಂದೂಪರ ಸಂಘಟನೆಗಳು ಶನಿವಾರ ಶಿವಮೊಗ್ಗ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಶನಿವಾರವೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸ ಲಾಗಿದೆ. ಯಾವುದೇ ಅಹಿತಕರ ಘಟನೆ ಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಫೆ.25ರವರೆಗೆ  ನಿಷೇಧಾಜ್ಞೆ  ವಿಸ್ತರಿಸಲಾಗಿದೆ. ಇದೇ ವೇಳೆ, ಗಲಭೆಯಲ್ಲಿ ಭಾಗಿಯಾದ ಶಂಕೆಯ 
ಮೇಲೆ ಪೊಲೀಸರು ಈವರೆಗೆ 50 ಜನರನ್ನು ಬಂಧಿಸಿದ್ದಾರೆ. 

No Comments

Leave A Comment