Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ನನ್ನ ಬೆಂಬಲಿಗ ಶಾಸಕರಿಗೆ ಜೀವ ಬೆದರಿಕೆ ಕರೆ ಬಂದಿತ್ತು: ಮಾಂಝಿ

ಪಾಟ್ನಾ: ತಮ್ಮ ಬೆಂಬಲಿಗ ಶಾಸಕರಿಗೆ ಜೀವ ಬೆದರಿಕೆ ಇತ್ತು ಎಂದು ಗಂಭೀರ ಆರೋಪ ಮಾಡಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ಸ್ಪೀಕರ್ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಂಝಿ, ವಿಧಾನಸಭೆ ಸ್ಪೀಕರ್ ಸದನದ ಸಂಪ್ರದಾಯಗಳನ್ನು ಪಾಲಿಸಿಲ್ಲ ಮತ್ತು ಅವರ ಕಾರ್ಯವೈಖರಿ ಅನುಮಾನ ಮೂಡಿಸುವಂತಿತ್ತು ಎಂದಿದ್ದಾರೆ.

ವಿಧಾನಸಭೆ ಸ್ಪೀಕರ್ ಹಲವು ಬಾರಿ ತಪ್ಪು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಸಿಎಂ ಆಗಿದ್ದಾಗಲೂ ನಾನು ಅವರಿಂದ ಕಿರುಕುಳ ಅನುಭವಿಸಿದ್ದೇನೆ. ಅಲ್ಲದೆ ನನಗೆ ಮತ್ತು ನನ್ನ ಬೆಂಬಲಿಗ ಶಾಸಕರಿಗೆ ಜೀವ ಬೆದರಿಕೆ ಕರೆಗಳು ಸಹ ಬಂದಿವೆ ಎಂದು ಮಾಂಝಿ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆ ಸಂಪ್ರದಾಯದಂತೆ ಸ್ಪೀಕರ್ ತಮ್ಮ ಬೆಂಬಲಿಗ ಶಾಸಕರಿಗೆ ಆಸನದ ವ್ಯವಸ್ಥೆ ಮಾಡಿರಲಿಲ್ಲ ಎಂದು ದೂರಿರುವ ಮಾಂಝಿ, ಶಾಸಕರು ಗುಪ್ತ ಮತದಾನ ಮಾಡಲು ಅವಕಾಶ ನೀಡುವಂತೆ ನಾವು ಮನವಿ ಮಾಡಿದ್ದೇವು. ಆದರೆ ಇದಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

ಸದನದಲ್ಲಿ ನನಗೆ 140ಕ್ಕು ಹೆಚ್ಚು ಶಾಸಕರ ಬೆಂಬಲ ಇತ್ತು. ಆದರೆ ಶಾಸಕರು ಬಹಿರಂಗ ಮತದಾನಕ್ಕೆ ಹಿಂದೇಟು ಹಾಕಿದರು. ಅಲ್ಲದೆ ಇದೇ ವರ್ಷ ಬಿಹಾರ ವಿಧಾಸಭೆ ಚುನಾವಣೆ ಇದೆ. ಚುನಾವಣೆ ಸಂದರ್ಭದಲ್ಲಿ ಶಾಸಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಾನು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದೆ ಎಂದು ಮಾಂಝಿ ತಿಳಿಸಿದ್ದಾರೆ.

ಇದೇ ವೇಳೆ ನಿತೀಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಂಝಿ, ಅವರು ಅಧಿಕಾರಕ್ಕಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ನಾನು ದಲಿತನಾಗಿದ್ದರಿಂದ ನನ್ನನ್ನು ಬಲಿಪಸು ಮಾಡಿದರು ಎಂದು ಆರೋಪಿಸಿದ್ದಾರೆ.

No Comments

Leave A Comment