Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಸೈಕ್ಲೋನ್ ಅಬ್ಬರ: ಜನರ ಜೀವನ ಅಸ್ತವ್ಯಸ್ಥ- ಈಶಾನ್ಯ ಆಸ್ಟ್ರೇಲಿಯಾದಲ್ಲಿ ಚಂಡಮಾರುತಕ್ಕೆ ಕಟ್ಟಡ ಕುಸಿತ, ಕಡಿತಗೊಂಡ ವಿದ್ಯುತ್/Cyclone Marcia reaches Queensland coast

ಸಿಡ್ನಿ: ಈಶಾನ್ಯ ಆಸ್ಟ್ರೇಲಿಯಾದಲ್ಲಿ ಅಪ್ಪಳಿಸಿರುವ ಸೈಕ್ಲೋನ್ ಚಂಡಮಾರುತದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಂಡಮಾರುತದ ಪ್ರಭಾವದಿಂದಾಗಿ ಈಗಾಗಲೇ ಅಲ್ಲಿನ ಹಲವು ಪ್ರದೇಶಗಳು ಜಲಾವೃತ್ತಗೊಂಡಿದ್ದು, ಮರಗಿಡಗಳು ಧರೆಗುರುಳಿದಿದೆ. ಚಂಡಮಾರುತದ ಅಬ್ಬರಕ್ಕೆ ಅಲ್ಲಿನ ಬಹುತೇಕ ಕಟ್ಟಡಗಳು ಕುಸಿದಿದ್ದು, ವಿದ್ಯುತ್ ಪ್ರಸರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸೈಕ್ಲೋನ್ ಚಂಡಮಾರುತ ಗಂಟೆಗೆ 285 ಕಿಮೀ ವೇಗದಲ್ಲಿ ಬೀಸುತ್ತಿದ್ದು, ಇದನ್ನು ವರ್ಗ 5ಕ್ಕೆ ಸೇರಿಸಲಾಗಿದೆ. ವಿಶ್ವದ ಶಕ್ತಿ ಶಾಲಿ ಚಂಡಮಾರುತಗಳಲ್ಲಿ ಇದೂ ಸಹ ಒಂದಾಗಿದ್ದು. ಭಾರಿ ಅನಾಹುತ ಉಂಟುಮಾಡಲಿದೆ. ಇದರ ವ್ಯಾಪ್ತಿ ಪ್ರದೇಶ ಹಾಗೂ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ ಎಂದು ಅಲ್ಲಿನ ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಈಗಾಗಲೇ ಅಲ್ಲಿನ ಜನರನ್ನು ಮನೆಯಿಂದ ಹೊರಗೆ ಬರದಿರುವಂತೆ ಸೂಚನೆ ನೀಡಲಾಗಿದೆ. ಕರಾವಳಿ ತೀರ ಪ್ರದೇಶ ತೀರ ಅಪಾಯದಲ್ಲಿದ್ದು, ಅಲ್ಲಿನ ಜನರನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಅಧಿಕಾರಿಗಳಿಗೆ ಕಟ್ಟೆಚ್ಚರವಹಿಸುವಂತೆ ತಿಳಿಸಲಾಗಿದೆ ಎಂದು ಅಲ್ಲಿನ ಸಚಿವರೊಬ್ಬರು ತಿಳಿಸಿದ್ದಾರೆ.

Yeppoon/Brisbane: A powerful cyclone packing winds of up to 285 kilometres per hour (171 mph) smashed into northern Australia on Friday.

Cyclone Marcia crossed the central Queensland coast near Shoalwater bay, north of Yeppoon, as a category five system, bringing with it drenching rains and fierce winds, local media reported.

Queensland state Premier Annastacia Palaszczuk urged residents not to venture outside and to take precautions.

“Over the next few hours, many thousands of Queenslanders are about to go through a harrowing and terrifying experience and I want those people to know that we are with you every step of the way. We will be standing by your side. This a severe cyclone. I want everyone to take all the precautions that they possibly can take,” Palaszczuk told reporters in Brisbane.

The Bureau of Meteorology warned that the cyclone was likely to cause flooding in low-lying areas.

No Comments

Leave A Comment