Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಎಸ್ಸೆಲ್ ಜಾಹೀರಾತು ಸ೦ಸ್ಥೆಯ ವಾದೀಂದ್ರ ಆಚಾರ್ಯ ಇನ್ನಿಲ್ಲ

ಉಡುಪಿ: ಉಡುಪಿಯ ಪ್ರಮುಖ ಜಾಹೀರಾತು ಸಂಸ್ಥೆ ಎಸ್ಸೆಲ್ ಅಡ್ವರ್ಟೈಸಿಂಗ್ ಮಾಲಕ ವಾದೀಂದ್ರ ಆಚಾರ್ಯ (56) ಹೃದಯಾಘಾತದಿಂದ ಫೆ.19ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ವಾದೀಂದ್ರ ಅವರು ಮೂಲತಃ ಬ್ರಹ್ಮಾವರ ಸಮೀಪದ ಗೋಳಿಬೈಲಿನವರು. ತೀರ್ಥಹಳ್ಳಿಯಲ್ಲಿ ಜನಿಸಿದ ವಾದೀಂದ್ರರು ಬಾಲ್ಯ, ವಿದ್ಯಾರ್ಥಿ ಜೀವನವನ್ನು ಹುಬ್ಬಳ್ಳಿಯಲ್ಲಿ ಕಳೆದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಪರ್ಕಕ್ಕೆ ಬಂದ ಅವರು ತುರ್ತುಪರಿಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿ ಜೈಲುವಾಸ ಅನುಭವಿಸಿದ್ದರು. ಸಾಮಾಜಿಕ ಚಟುವಟಿಕೆಗಳಿಂದಾಗಿಯೇ ಅವರ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಮಧ್ಯದಲ್ಲಿ ನಿಲ್ಲುವಂತಾಯಿತು. ಸುದೀರ್ಘ ಕಾಲ ಹುಬ್ಬಳ್ಳಿಯಲ್ಲಿ ಎಬಿವಿಪಿ ಸಕ್ರಿಯ ಕಾರ್ಯಕರ್ತರಾಗಿದ್ದ ವಾದೀಂದ್ರ ಅವರು ಕೇಂದ್ರ ಸಚಿವ ಅನಂತಕುಮಾರ್, ಆರೆಸ್ಸೆಸ್ ರಾಷ್ಟ್ರೀಯ ಸ್ತರದಲ್ಲಿರುವ ದತ್ತಾತ್ರೇಯ ಹೊಸಬಾಳೆ, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಷಿಯಂತಹ ಪ್ರಮುಖರ ಸಮೀಪವರ್ತಿಯಾಗಿದ್ದರು. ಇಂತಹ ಪ್ರಮುಖರ ಜೊತೆ ಸಂಪರ್ಕವಿದ್ದರೂ ಅದನ್ನು ಎಂದೂ ತೋರಿಸಿದವರಲ್ಲ.

ಹುಬ್ಬಳ್ಳಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ವಾದೀಂದ್ರ ಅವರು ಉಡುಪಿಯಲ್ಲಿ ಎಸ್ಸೆಲ್ ಅಡ್ವರ್ಟೈಸಿಂಗ್ ಸಂಸ್ಥೆಯನ್ನು ದೀರ್ಘ ಕಾಲ ಮುನ್ನಡೆಸಿದರು. ಕಲಿಯಲು ಹೋದದ್ದು ಸಿ‌ಎ, ಸಾಮಾಜಿಕ ಜೀವನದಲ್ಲಿ ಎಬಿವಿಪಿ, ವೃತ್ತಿಯಲ್ಲಿ ಹೊಟೇಲ್, ಈಗ ಜಾಹೀರಾತು ಪ್ರಪಂಚ ಹೀಗೆ ನಾನಾ ಕ್ಷೇತ್ರಗಳಲ್ಲಿ ವಾದೀಂದ್ರ ಕೈಯಾಡಿಸಿದ್ದರು. ವೈಯಕ್ತಿಕವಾಗಿ ಹಲವು ವಿಚಾರಗಳಲ್ಲಿ ಚಿಂತನಶೀಲ ಗುಣ, ವ್ಯಾಪಕ ಓದಿನ ಹವ್ಯಾಸ, ಸಾಮಾಜಿಕ ಕಳಕಳಿಯನ್ನು ವಾದೀಂದ್ರ ಹೊಂದಿದ್ದರು.

ವಾದೀಂದ್ರ ಆಚಾರ್ಯರವರ ನಿಧನಕ್ಕೆ ಕರಾವಳಿ ಕಿರಣ ಡಾಟ್ ಕಾ೦ ಬಳಗವು ಸ೦ತಾಪ ಸೂಚಿಸಿದೆ. 

No Comments

Leave A Comment