Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಇನ್ನಾ ಗ್ರಾಪಂ ಅಧ್ಯಕ್ಷೆಯಾಗಿ ಸುಲೋಚನಾ ಮರುಆಯ್ಕೆ

ಪಡುಬಿದ್ರೆ: ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಇನ್ನಾ ಗ್ರಾಪಂ ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲಿ ಸುಲೋಚನಾ ಕೋಟ್ಯಾನ್ ಮರು ಆಯ್ಕೆಯಾಗಿರುವುದಾಗಿ ಗುರುವಾರ ಕಾರ್ಕಳ ತಾಲೂಕು ತಹಶೀಲ್ದಾರ್ ಎಸ್.ರಾಘವೇಂದ್ರ ಘೋಷಿಸಿದ್ದಾರೆ.

 ಇನ್ನಾ ಗ್ರಾಪಂನಲ್ಲಿ ಒಟ್ಟು 9 ಸದಸ್ಯರು ಇದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಇಲ್ಲಿ 8 ಬಿಜೆಪಿ ಬೆಂಬಲಿತ ಹಾಗೂ ಏಕೈಕ ಮಹಿಳೆ ಕಾಂಗ್ರೆಸ್ ಬೆಂಬಲಿತರಾಗಿ ಜಯಗಳಿಸಿದ್ದರು. ಮೊದಲ ಬಾರಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರಸಾದ್ ಶೆಟ್ಟಿ ಆಯ್ಕೆಯಾದರೆ ಎರಡನೆ ಬಾರಿಗೆ ಹಿಂದುಳಿದ ಮಹಿಳೆ ಮೀಸಲಾತಿ ಆಗಿತ್ತು. ಇದರಂತೆ ಸುಲೋಚನಾ 2013ರ ನವೆಂಬರ್ 16ರಂದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದರೆ ಬಳಿಕ ಗ್ರಾಪಂ ಚುನಾವಣೆಗೆ 2 ತಿಂಗಳು ಇರುವಾಗಲೇ ಅಧ್ಯಕ್ಷೆ ವಿರುದ್ಧ ಜನವರಿ 28ರಂದು ಬಿಜೆಪಿ ಬೆಂಬಲಿತ 8 ಸದಸ್ಯರು ಅವಿಶ್ವಾಸ ಮಂಡಿಸಿ ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ್ಯಾರೂ ಇಲ್ಲದೆ ಪಂಚಾಯತ್ ಕಾರ್ಯವೇ ಸ್ಥಗಿತಗೊಂಡಿತ್ತು.

ಜಿಲ್ಲಾ ಡಳಿತ ಮಧ್ಯ ಪ್ರವೇಶಿಸಿ ಅಧ್ಯಕ್ಷರ ಮರು ಆಯ್ಕೆಗೆ ಫೆ. 18ರಂದು ದಿನ ನಿಗದಿಪಡಿಸಲಾಗಿತ್ತು. ಅಂದು ಬಿಜೆಪಿ ಬೆಂಬಲಿತರು ಗೈರು ಹಾಜರಾಗಿದ್ದು, ಸುಲೋಚನಾ ಕೋಟ್ಯಾನ್ ಏಕೈಕ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದರು. ಕೋರಂ ಕೊರತೆಯಿಂದ ಚುನಾವಣೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಗುರುವಾರವೂ ಬಿಜೆಪಿ ಬೆಂಬಲಿತ ಸದಸ್ಯರು ಗೈರು ಹಾಜರಾಗಿದ್ದು, ಸುಲೋಚನಾ ಬಂಗೇರ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದಾಗಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

No Comments

Leave A Comment