Log In
BREAKING NEWS >
ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಆಕ್ಷೇಪಾರ್ಹ ಘೋಷಣೆಗೆ ಶಿವಮೊಗ್ಗ ಉದ್ವಿಗ್ನ : ನಗರದಲ್ಲಿ ನಿಷೇದಾಜ್ಞೆ

ಶಿವಮೊಗ್ಗ : ನಗರದಲ್ಲಿ ಪಾಪ್ಯುಲರ್‌ ಫ್ರಂಟ್‌ ಸಂಘಟನೆಯು ಆಯೋಜಿಸಿದ್ದ ಏಕತಾ ಜಾಥಾ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾತಿನ ಚಕಮಕಿಯು ಘರ್ಷಣಾ ಸ್ವರೂಪ ಪಡೆದುಕೊಂಡ ಕಾರಣ ನಗರದಲ್ಲಿ ಪೊಲೀಸರು ನಿಷೇದಾಜ್ಞೆ ವಿಧಿಸಿದ್ದಾರೆ.

ಪಾಪ್ಯುಲರ್‌ ಫ್ರಂಟ್‌ ಸಂಘಟನೆಯು ನಗರದಲ್ಲಿ ಗುರುವಾರದಂದು ಏಕತಾ ಜಾಥಾವನ್ನು ಆಯೋಜಿಸಿತ್ತು. ಇದರಂಗವಾಗಿ ಸಾಗಿ ಬರುತ್ತಿದ್ದ ಮೆರವಣಿಗೆಯಲ್ಲಿ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಯಿತು ಎಂದು ಇನ್ನೊಂದು ಗುಂಪು ಪ್ರಶ್ನಿಸಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಮತ್ತು ಒಂದು ಹಂತದಲ್ಲಿ ಎರಡೂ ಗುಂಪುಗಳ ನಡುವೆ ಕೈ-ಕೈ ಮಿಲಾಯಿಸುವ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು.

ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಅಮಿರ್‌ ಅಹಮ್ಮದ್‌ ವೃತ್ತ ಬಳಿ ಈ ಘಟನೆ ಸಂಭವಿಸಿದೆ. ಮಾತ್ರವಲ್ಲದೆ ಗಾಂಧಿನಗರದಲ್ಲಿ ಪರಸ್ಪರ ಕಲ್ಲು ತೂರಾಟ ಘಟನೆಯೂ ನಡೆದಿರುವ ಕುರಿತು ವರದಿಯಾಗಿದೆ.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠೀ ಪ್ರಹಾರವನ್ನು ನಡೆಸಿದರು. ಬಳಿಕ ಇದೀಗ ಆ ಪ್ರದೇಶದಲ್ಲಿ ನಿಷೇದಾಜ್ಞೆಯನ್ನು ವಿಧಿಸಲಾಗಿದೆ.

No Comments

Leave A Comment