Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

8 ಶಾಸಕರಿಗೆ ಪಾಟ್ನಾ ಹೈಕೋರ್ಟ್ ಮೂಗುದಾರ; ಮಾಂಝಿಗೆ ಹಿನ್ನಡೆ

ಪಾಟ್ನಾ: ಬಿಹಾರ ರಾಜಕೀಯ ಬಿಕ್ಕಟ್ಟಿಗೆ ನಾಳೆ ತೆರೆ ಬೀಳಲಿದ್ದು, ಏತನ್ಮಧ್ಯೆ ಜೆಡಿಯುನಿಂದ ಬಂಡಾಯವೆದ್ದಿದ್ದ 8 ಮಂದಿ ಶಾಸಕರಿಗೆ ಶುಕ್ರವಾರ ನಡೆಯಲಿರುವ ವಿಶ್ವಾಸಮತ ಸಂದರ್ಭದಲ್ಲಿ ಮತ ಚಲಾಯಿಸದಂತೆ ಪಾಟ್ನಾ ಹೈಕೋರ್ಟ್ ನಿರ್ಬಂಧ ವಿಧಿಸಿರುವುದು ಬಿಹಾರ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿಗೆ ದೊಡ್ಡ ಹಿನ್ನಡೆ ಉಂಟು ಮಾಡಿದೆ.

ಪಾಟ್ನಾ ಹೈಕೋರ್ಟ್ ನ ದ್ವಿಸದಸ್ಯ ಪೀಠ ನೀಡಿರುವ ಗುರುವಾರ ನೀಡಿದ್ದ ಈ ಆದೇಶ ನಾಳೆ ಬಿಹಾರ ಅಸೆಂಬ್ಲಿಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಮಾಂಝಿಗೆ ಕಂಟಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ 8 ಮಂದಿ ಸೇರಿದಂತೆ ತನಗಿರುವ ಬೆಂಬಲವನ್ನು ಗುರುವಾರ ಸಂಜೆ ಬಲಪ್ರದರ್ಶಿಸಲು ಮಾಂಝಿ ನಿರ್ಧರಿಸಿದ್ದರು. ಅಷ್ಟೇ ಅಲ್ಲ ಇಂದು ಸಂಜೆ ಕ್ಯಾಬಿನೆಟ್ ಸಭೆಯನ್ನು ಕೂಡಾ ಕರೆದಿದ್ದರು. ಆದರೆ ಇದೀಗ ಮಾಂಝಿ ಬೆಂಬಲಿತ 8 ಮಂದಿ ಜೆಡಿಯು ಸದಸ್ಯರು ಮತದಾನ ಮಾಡುವಂತಿಲ್ಲ ಎಂಬ ಹೈಕೋರ್ಟ್ ಆದೇಶ ಮಾಂಝಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

No Comments

Leave A Comment