Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಅಂಬಲಪಾಡಿ: ರಸ್ತೆ ಕಾಂಕ್ರೀಟೀಕರಣಕ್ಕೆ ಸ೦ಸದೆಯಿ೦ದ ಗುದ್ದಲಿ ಪೂಜೆ

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಕುಂಜಗುಡ್ಡೆ ಕಂಬಳ ಬೈಲು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಮತ್ತು ಕಾಂಕ್ರೀಟ್ ಮೋರಿ ಅಭಿವೃದ್ಧಿಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತನ್ನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.೭.೫೦ ಲಕ್ಷ ಅನುದಾನವನ್ನು ಮೀಸಲಿರಿಸಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಅಂಬಲಪಾಡಿ ಗ್ರಾ.ಪಂ. ಪ್ರಭಾರ ಅಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಅಂಬಲಪಾಡಿ ವಾರ್ಡ್ ಗ್ರಾ.ಪಂ. ಸದಸ್ಯರಾದ ಎ.ಯೋಗೀಶ್ ಶೆಟ್ಟಿ, ಎ.ಶಿವಕುಮಾರ್, ಭಾರತಿ ಭಾಸ್ಕರ್, ಸುನಿಲ್ ಕುಮಾರ್, ಕಿದಿಯೂರು ವಾರ್ಡ್ ಗ್ರಾ.ಪಂ. ಸದಸ್ಯರಾದ ವೆಂಕಟರಮಣ ಕಿದಿಯೂರು, ಉಷಾ, ಪ್ರಮೋದ್ ಸಾಲ್ಯಾನ್, ನಿರ್ಮಲ, ಕಪ್ಪೆಟ್ಟು ವಾರ್ಡ್ ಗ್ರಾ.ಪಂ. ಸದಸ್ಯರಾದ ಜಗದೀಶ್ ಆಚಾರ್ಯ, ವಿಜಯ ಶೆಟ್ಟಿ, ಸುಮಂಗಲ, ಅಂಬಲಪಾಡಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ರಾಮರಾಜ್ ಕಿದಿಯೂರು, ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಗಿರೀಶ್ ಅಮೀನ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಅನಿಲ್‌ರಾಜ್, ಶ್ರೀಕಾಂತ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಡೆಕಾರು, ಸ್ಥಳೀಯ ಪ್ರಮುಖರಾದ ಸತೀಶ್ ಶೆಟ್ಟಿ, ಭಾಸ್ಕರ ಆಚಾರ್ಯ, ಲಕ್ಷ್ಮಣ ಕುಂಜಗುಡ್ಡೆ, ಮನೋಹರ್ ಶೆಟ್ಟಿ, ಬಾಬು ಶೆಟ್ಟಿ, ರಮೇಶ್, ಜಯಕರ ಪೂಜಾರಿ, ದಯಾನಂದ, ಪಾಂಡುರಂಗ, ಹರಿಣಾಕ್ಷಿ, ಶೈಲಜ, ಸುನಂದ, ಗುತ್ತಿಗೆದಾರ ಸುಂದರ್ ಕಲ್ಮಾಡಿ ಮುಂತಾದವರು ಹಾಗೂ ಪರಿಸರದ ಗ್ರಾಮಸ್ಥರು ಉಪಸ್ಥಿತರಿದ್ದರು.

No Comments

Leave A Comment