Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಮಾ.1ರಿ೦ದ 31ರವರೆಗೆ ದ.ಕ., ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವಜ್ರ ಮಹೋತ್ಸವ:ಯಶ್‌ಪಾಲ್ ಎ. ಸುವರ್ಣ

ಉಡುಪಿ:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟಫೆಡರೇಶನ್ ಸಂಸ್ಥೆಯು ಸ್ಥಾಪನೆಗೊಂಡು 60ಸಂವತ್ಸರಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ ವಜ್ರ ಮಹೋತ್ಸವವನ್ನು ಮಾರ್ಚ್‌ನಲ್ಲಿ

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಚರಿಸಿಕೊಳ್ಳಲಿದೆ.

1994ರಲ್ಲಿ ಮೀನುಗಾರ ಮುಖಂಡರಾದ ದಿ.ಆರ್.ಡಿ.ಮೆಂಡನ್ ಕಾಪು, ಅಂದಿನ ಶಾಸಕ ದಿ.ಎಸ್.ಕೆ. ಅಮೀನ್ ನೇತೃತ್ವದಲ್ಲಿ ಸ್ಥಾಪನೆಗೊಂಡು, ಉಭಯ ಜಿಲ್ಲೆಗಳಲ್ಲಿ ಮೀನುಗಾರಿಕೆ ಹಾಗೂ ಮೀನುಗಾರರ ಅಭಿವೃದ್ಧಿಗಾಗಿ
ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಸಂಸ್ಥೆಯಿಂದಾಗಿ ಕರಾವಳಿಯ ಮೀನುಗಾರರು ಮೀನುಗಾರಿಕೆಯಲ್ಲಿ ಆಧುನಿಕ ವಿಧಾನ, ಯಾಂತ್ರಿಕತೆಯನ್ನು ಅಳವಡಿಸಿ ಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಿದ್ದಾರೆ.

ಮಾ.1ರಂದು ಮಲ್ಪೆ ಬೀಚ್‌ನಲ್ಲಿ ವಜ್ರ ಮಹೋತ್ಸವದ ಉದ್ಘಾಟನೆ ನೆರವೇರಲಿದೆ. ಮಾ. 21ರಂದು ಕುಂದಾಪುರದಲ್ಲಿ ಬೃಹತ್ ಮೀನುಗಾರ ಮಹಿಳೆಯರ ಸಮಾವೇಶ, ಮಾ.31ರಂದು ಮಂಗಳೂರಿನಲ್ಲಿ ಸ್ಮರಣ ಸಂಚಿಕೆ ಬಿಡುಗಡೆ,ಗ್ರಾಹಕರ ಸಮಾವೇಶ ಹಾಗೂ ಸಮಾರೋಪ ಸಮಾರಂಭ ನಡೆಸಲಾಗುವುದು.

ಕ್ರೀಡಾಕೂಟ: ಉದ್ಘಾಟನಾ ಸಮಾರಂಭದ ಅಂಗವಾಗಿ ಬೆಳಗ್ಗೆ 9.30ರಿಂದ ಕರಾವಳಿ ಕ್ರೀಡೆಗಳಾದ ಪುರುಷರಿಗೆ ಬೀಚ್ ವಾಲಿಬಾಲ್, ಕಬಡ್ಡಿ ಪಂದ್ಯಾಟ, ಹಗ್ಗ ಜಗ್ಗಾಟ,ಈಜು ಸ್ಪರ್ಧೆಯನ್ನು ಜೂನಿಯರ್ – ಸೀನಿಯರ್
ವಿಭಾಗದಲ್ಲಿ ನಡೆಸಲಾಗುವುದು.

ಮಹಿಳೆಯರಿಗೆ ಬೀಚ್ ತ್ರೋ ಬಾಲ್, ಕಬಡ್ಡಿ ಪಂದ್ಯ, ಹಗ್ಗ ಜಗ್ಗಾಟ, ಸಾರ್ವಜನಿಕರಿಗೆ ಮರಳು ಶಿಲ್ಪ ಆಕೃತಿ ರಚನೆ(ವಿಷಯ: ದೀಪಸ್ತಂಭ), ಡ್ರಾಯಿಂಗ್ ಸ್ಪರ್ಧೆಗಳನ್ನುಜೂನಿಯರ್ – ಸೀನಿಯರ್ ವಿಭಾಗಗಳಲ್ಲಿ (ವಿಷಯ:
ಮೀನುಗಾರಿಕೆ) ಆಯೋಜಿಸಲಾಗಿದೆ.

ಮತ್ಸ ಮೇಳ: ಮಧ್ಯಾಹ್ನ ೩ರಿಂದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ, ಅಂತಾರಾಷ್ಟ್ರೀಯ ಖ್ಯಾತಿಯ ಟೀಂ ಮಂಗಳೂರು ಅವರಿಂದ ಗಾಳಿಪಟ ಪ್ರದರ್ಶನ, ವಿಶೇಷಆಕರ್ಷಣೆಯಾಗಿ ಹಿಂದಿನ ಸಾಂಪ್ರದಾಯಿಕ ಶೈಲಿಯ
ಕೈರಂಪಣಿ ಮೀನುಗಾರಿಕೆ ಪ್ರದರ್ಶನ, ಕರಾವಳಿಯ ರುಚಿಕರ ತಾಜಾ ಮೀನಿನ ಮತ್ಸ್ಯಮೇಳ ಆಹಾರ ಮಳಿಗೆಗಳನ್ನು ತೆರೆಯಲಾಗುವುದು. ಸಂಜೆ ೫ರಿಂದ ಸಭಾ ಕಾರ್‍ಯಕ್ರಮ,ನಂತರ ಚಿತ್ರ – ಮಿತ್ರ ಖ್ಯಾತಿಯ ಪ್ರಶಾಂತ್ ಶೆಟ್ಟಿ ಅವರಿಂದತೈಲ ವರ್ಣಚಿತ್ರ ರಚನೆ ನಡೆಯಲಿರುವುದು.

ನೃತ್ಯ ಪ್ರದರ್ಶನ: ಸಾಂಸ್ಕೃತಿಕ ಕಾರ್‍ಯಕ್ರಮದ ಪ್ರಯುಕ್ತ ಚಲನಚಿತ್ರ ಗಾಯಕರಾದ ಎಂ.ಡಿ. ಪಲ್ಲವಿ, ರಾಜೇಶ್ ಕೃಷ್ಣನ್ ತಂಡದವರಿಂದ ಸಂಗೀತ ರಸಮಂಜರಿ, ರಾಷ್ಟ್ರಪ್ರಶಸ್ತಿ ವಿಜೇತ ಭಾರ್ಗವಿ ತಂಡದವರಿಂದ ನೃತ್ಯ ಪ್ರದರ್ಶನ ಜರಗಲಿರುವುದು. ಈ ಕಾರ್‍ಯಕ್ರಮದಲ್ಲಿ ಕೇಂದ್ರ – ರಾಜ್ಯದರಾಜಕೀಯ ನೇತಾರರು, ಚಲನಚಿತ್ರ ನಟರು, ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ತಿಳಿಸಿದ್ದಾರೆ.

 

No Comments

Leave A Comment