Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಶಿವಪಾಡಿ ದೇವಳದಲ್ಲಿ ಶಿವರಾತ್ರಿ ಮಹೋತ್ಸವ

ಉಡುಪಿ: ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳೆಂದರೆ ದೊಡ್ಡ ರಥವನ್ನು ಎಳೆದಂತೆ. ಒಬ್ಬೊಬ್ಬರು ರಥದ ಹಗ್ಗಕ್ಕೆ ಕೈಕೊಟ್ಟರೆ ದೊಡ್ಡ ರಥ ಸುಲಭವಾಗಿ ಚಲಿಸುತ್ತದೆ. ಇದೇ ರೀತಿ ದೇವಸ್ಥಾನಗಳ ಅಭಿವೃದ್ಧಿಯೂ ಸಾರ್ವಜನಿಕರ ಸಹಕಾರದಿಂದ ನಡೆಯುತ್ತದೆ ಎಂದು ಮಣಿಪಾಲದ ಉದ್ಯಮಿ ಟಿ. ಅಶೋಕ್‌ ಪೈ ಅಭಿಪ್ರಾಯಪಟ್ಟರು.

ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮಹಾಶಿವರಾತ್ರಿ ಮಹೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಮಾತನಾ ಡಿದ ಅವರು, ಚಿಕ್ಕಂದಿನಿಂದ ತಾಯಿಯೊಂದಿಗೆ ಶಿವಪಾಡಿ ದೇವ ಸ್ಥಾನಕ್ಕೆ ಬರುತ್ತಿದ್ದುದನ್ನು, 1981ರಲ್ಲಿ ಇದೇ ದೇವಸ್ಥಾನದ ಸಭಾಂಗಣವನ್ನು ಟಿ.ಎ. ಪೈ ಉದ್ಘಾಟಿಸಿದುದು, ಅವರ ಕೊನೆಯ ಕಾರ್ಯಕ್ರಮ ಇದೇ ಆಗಿರುವುದನ್ನು ಸ್ಮರಿಸಿಕೊಂಡರು.

ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಾಯತ್ರೀ ಪೈ, ಉದ್ಯಮಿ ಪಿ. ಪುರುಷೋತ್ತಮ ಶೆಟ್ಟಿ,  ಮಣಿಪಾಲ ಎಂಐಟಿ ಜಂಟಿ ನಿರ್ದೇಶಕ ಶ್ರೀಕಾಂತ ರಾವ್‌, ಮಣಿಪಾಲ ವಿ.ವಿ. ಎಸ್ಟೇಟ್‌ ಅಧಿಕಾರಿ ಕೆ.ಎಸ್‌. ಜೈವಿಟuಲ್‌, ಸಿಂಡಿಕೇಟ್‌ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಅನಂತ ನಾಯ್ಕ ಅಭ್ಯಾಗತರಾಗಿದ್ದರು.

ಆಡಳಿತ ಮೊಕ್ತೇಸರ ಎಚ್‌. ಪುರುಷೋತ್ತಮ ಪ್ರಭು ಉಪಸ್ಥಿತ ರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿ ಸಂಚಾಲಕ ಎಸ್‌. ದಿನೇಶ ಪ್ರಭು ವಂದಿಸಿದರು. ಶಾಶ್ವತ ಟ್ರಸ್ಟಿ ದಿನೇಶ ಸಾಮಂತ್‌ ಪ್ರಸ್ತಾವನೆಗೈದು ಕೋಟಿ ಶಿವಪಂಚಾಕ್ಷರಿ ಲೇಖನ ಯಜ್ಞ, ದ್ವಾರಬಂದಕ್ಕೆ ರಜತ ಸಂಗ್ರಹ ಯಶಸ್ವಿ ಯಾಗಿ ನಡೆದಿದೆ. ಎ. 8ರಿಂದ 13ರ ವರೆಗೆ ಬ್ರಹ್ಮಕಲೋತ್ಸವ, 1.38 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು. ಗಣೇಶ ಪಾಟೀಲ್‌ ಕಾರ್ಯಕ್ರಮ ನಿರ್ವಹಿಸಿದರು. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಶುಭ ಕೋರಿದರು.

No Comments

Leave A Comment