Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಬ್ರಹ್ಮಾವರ:ಬೆದರಿಕೆಯೊಡ್ಡಿ ಮನೆಯಿ೦ದ ಲಕ್ಷ ರೂ ಸೊತ್ತು ದರೋಡೆ

ಬ್ರಹ್ಮಾವರ:ದಿನಾಂಕ:08/02/2015 ರಂದು ರಾತ್ರಿ 11:30 ಗಂಟೆಗೆ ಉಡುಪಿ ತಾಲೂಕು ಆರೂರು ಗ್ರಾಮದ ಶಿವನಗರ ಕಂಬಳಗದ್ದೆ ಕ್ರಾಸ್ ಎಂಬಲ್ಲಿರುವ ಪಿರ್ಯಾದಿದಾರರಾದ ಸಂದೇಶ್ (28) ತಂದೆ:ಸೂರ್ಯನಾರಾಯಣ ಸ್ವಾಮಿಜಿ ವಾಸ:ಶಿವನಗರ ಕಂಬಳಗದ್ದೆ ಕ್ರಾಸ್ ಆರೂರು ಗ್ರಾಮ ಇವರ ಮನೆಗೆ ಈ ಹಿಂದೆ ಔಷಧಿಗಾಗಿ ಬಂದಿದ್ದ ವ್ಯಕ್ತಿ ಬಂದು ಮನೆಯ ಬಾಗಿಲು ಬಡಿದಾಗ ಸಂದೇಶ್ರವರು ಕಿಟಕಿಯಲ್ಲಿ ನೋಡಿ ವಿಚಾರಿಸಿದಾಗ ಔಷಧಿ ಬೇಕೆಂದು ಕೇಳಿರುತ್ತಾನೆ. ಔಷಧಿ ಬೆಳಿಗ್ಗೆ ಕೊಡುವುದಾಗಿ ತಿಳಿಸಿದಾಗ ತಾನು ಇಲ್ಲೇ ಮಲಗುವುದಾಗಿ ಹೇಳಿ ಸ್ವಲ್ಪ ಜಾಗ ಕೊಡಿ ಎಂದಾಗ ಸಂದೇಶ್‌ರವರು ಮನೆಯ ಪಕ್ಕದ ಹಾಲ್‌ನ ಶೆಟರ್ ಬಾಗಿಲು ತೆಗೆಯಲೆಂದು ಮನೆಯೆ ಬಾಗಿಲು ತೆಗೆದು ಹೊರಗಡೆ ಬಂದಾಗ ಮನೆಯ ಬಳಿ ಇದ್ದ ಆರೋಪಿಗಳು ಒಮ್ಮೇಲೆ ರಾಡ್ ಮತ್ತು ಮಚ್ಚು ಹಿಡಿದುಕೊಂಡು ಬಂದು, ಒಬ್ಬನು ರಾಡ್‌ನಿಂದ ಸಂದೇಶ್‌ರವರ ಬೆನ್ನಿಗೆ ಹೊಡೆದಿರುತ್ತಾನೆ. ಇನ್ನೊಬ್ಬ ಮಚ್ಚಿನಿಂದ ಕಡಿಯಲು ಬಂದಾಗ ಅದು ತಪ್ಪಿ ಕಂಬಕ್ಕೆ ತಾಗಿರುತ್ತದೆ.

ಸಂದೇಶ್‌ರವರು ಬಿದ್ದಲ್ಲಿಂದ ಬೊಬ್ಬೆ ಹಾಕದಂತೆ ಕುತ್ತಿಗೆ ಹಿಡಿದುಕೊಂಡು ಮನೆಯೊಳಗೆ ತಳ್ಳಿಕೊಂಡು ಹೋಗಿ ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿಸಿ ಕೆಲವರು ಸಂದೇಶ್‌ರವರ ಹೆಂಡತಿಯನ್ನು ಹಿಡಿದುಕೊಂಡು ಬಾಯಿ ಒತ್ತಿ ಹಿಡಿದು ಸಂದೇಶ್ ಮತ್ತು ಸಂದೇಶ್‌ರ ಹೆಂಡತಿಯ ಮೊಬೈಲ್ ಪೋನ್‌ಗಳನ್ನು ಕಸಿದುಕೊಂಡು “ಚಿನ್ನ ಹಣ ಎಲ್ಲಿದೆ ತೋರಿಸಿ ಇಲ್ಲದಿದ್ದರೆ ನಿಮ್ಮನ್ನು ಮಗುವನ್ನು ಸಾಯಿಸುತ್ತೇವೆ” ಎಂದು ಬೆದರಿಸಿ ಆರೋಪಿಗಳು ಮೊಬೈಲ್ ಪೋನ್‌ನ ಲೈಟ್‌ನ ಬೆಳಕಿನಲ್ಲಿ ಬೆಡ್‌ರೂಮ್‌ಗೆ ಎಳೆದುಕೊಂಡು ಹೋಗಿ, ಬಲವಂತವಾಗಿ ಕಪಾಟಿನ ಬೀಗ ತೆಗೆಸಿ ಅದರಲ್ಲಿದ್ದ ನಗದು ರೂಪಾಯಿ 18000/-, ಸುಮಾರು 8 ಗ್ರಾಂ ತೂಕದ ಚಿನ್ನದ ಬಳೆ, 3 ಗ್ರಾಂ ತೂಕದ ಚಿನ್ನದ ಉಂಗುರ, ಮಗುವಿನ ಬೆಳ್ಳಿಯ ಕಾಲು ಚೈನ್ 1 ಜೊತೆ ತೆಗೆದುಕೊಂಡಿರುತ್ತಾರೆ. ಸಂದೇಶ್‌ರವರ ಹೆಂಡತಿಯನ್ನು ಬೆದರಿಸಿ 5 ಪವನ್ ತೂಕದ ಕರಿಮಣಿ ಸರ, 3ಗ್ರಾಂ ತೂಕದ 1 ಜೊತೆ ಕಿವಿಯ ಬೆಂಡೋಲೆ ಕಸಿದುಕೊಂಡಿರುತ್ತಾರೆ. ಸಂದೇಶ್‌ರವರನ್ನು ಮತ್ತೊಂದು ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಲ್ಯಾಪ್ ಟಾಪ್ ಮತ್ತು ಕರೆಂಟ್ ಸ್ಟೌವ್ ತೆಗೆದುಕೊಂಡಿರುತ್ತಾರೆ.

ಹೀಗೆ ಸುಮಾರು ಅರ್ಧ ಗಂಟೆ ಜಾಲಾಡಿ ಸಂದೇಶ್‌ರವರನ್ನು ಅವರ ಹೆಂಡತಿಯನ್ನು ಮಗುವನ್ನು ಪ್ಲೈವುಡ್ ಬಾಗಿಲಿರುವ ಕೋಣೆಯೊಳಗೆ ಹಾಕಿ ಚಿಲಕ ಹಾಕಿ, ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಸಿ ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಹೋಗಿರುತ್ತಾರೆ. ಸೊತ್ತಿನ ಮೌಲ್ಯ ಸುಮಾರು 1,70,000/-ರೂಪಾಯಿ ಆಗಬಹುದು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2015 ಕಲಂ 397 ಐಪಿಸಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No Comments

Leave A Comment