Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಟ್ರ‍್ಯಾಕ್ಟರ್‌-ಕ್ರೂಸರ್‌ ಮುಖಾಮುಖಿ ಢಿಕ್ಕಿ: ನಾಲ್ವರ ಮೃತ್ಯು

ಶಿವಮೊಗ್ಗ, ಫೆ. 6: ಟ್ರ‍್ಯಾಕ್ಟರ್‌ ಮತ್ತು ಕ್ರೂಸರ್‌ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ರಸ್ತೆಯ ಮಲ್ಲಾಪುರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮೃತರನ್ನು ದೇವೇಂದ್ರಪ್ಪ( 44), ವನಜಾಕ್ಷಮ್ಮ (39), ಮಾದಮ್ಮ( 30) ಹಾಗೂ ಲಕ್ಷ್ಮೀ(4) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಚಿತ್ರದುರ್ಗದಿಂದ ಸಿಗಂದೂರು ಕಡೆ ತೆರಳುತ್ತಿದ್ದ ಕ್ರೂಸರ್‌ ವಾಹನ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ರಸ್ತೆಯ ಮಲ್ಲಾಪುರದ ಬಳಿ ಟ್ರ‍್ಯಾಕ್ಟರ್‌ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಇದರಿಂದ ಟ್ರ‍್ಯಾಕ್ಟರ್‌ ಚಾಲನ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ಕ್ರೂಸರ್‌ ವಾಹನದಲ್ಲಿದ್ದ 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಪೊಲೀಸ್‌ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment