Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಕ್ಲಾಸಿಕ್ ಬಿಲ್ಡರ್ಸ್ ಮಾಲೀಕನಿ೦ದ ಹಲ್ಲೆ ನಡೆಸಿ, ಜೀವ ಬೆದರಿಕೆ

ಉಡುಪಿ: ದಿನಾಂಕ 25-01-2015 ರಂದು ಫಿರ್ಯಾದಿದಾರರಾದ ಸುಂದರ ಶೇರಿಗಾರ (44) ರಾಜು ದೇವಾಡಿಗ ವಾಸ ಪರಮೇಶ್ವರ ನಿವಾಸ ತಾಂಗದಗಡಿ ನಿಟ್ಟೂರು ಪುತ್ತೂರು ಗ್ರಾಮ ಉಡುಪಿ ತಾಲೂಕು ರವರು ಮನೆಯಲ್ಲಿರುವಾಗ ಕ್ಲಾಸಿಕ್ ಬಿಲ್ಡರ್ಸ್ ಮಾಲೀಕ ಪ್ರಭಾಕರ ಜಿ ಎಂಬವರು ತಮ್ಮ ಐ 20 ಕಾರನ್ನು ಫಿರ್ಯಾದಿದಾರರ ಮನೆಗೆ ಕಳುಹಿಸಿದ್ದು ಸದ್ರಿ ಕಾರಿನಲ್ಲಿ ಸಚಿನ್ ಮತ್ತು ಓರ್ವ ಕಾರು ಚಾಲಕ ಬಂದು ಮೂಡುಸಗ್ರಿಯಲ್ಲಿನ ಮನೆಯಲ್ಲಿ ಪಂಪ್‌ ಹಾಳಾಗಿದ್ದು ರಿಪೇರಿ ಮಾಡುವಂತೆ ಪ್ರಭಾಕರರವರು ತಿಳಿಸಿದ್ದಾರೆ ಎಂದು ಹೇಳಿ ಫಿರ್ಯಾದಿದಾರರನ್ನು ಕರೆದುಕೊಂಡು ಮೂಡುಸಗ್ರಿ ಮನೆಗೆ ಹೋಗದೆ ವಾಸುಕೀ ನಗರದ ಪ್ರಭಾಕರ ಜಿ ರವರ ಮನೆಗೆ ಕೆರೆದುಕೊಂಡು ಹೋಗಿದ್ದು, ಫಿರ್ಯಾದಿದಾರರು ಮನೆಯ ಹೊರಗಿನ ಹಟ್ ಒಂದರಲ್ಲಿ ಕುಳಿತುಕೊಂಡಿರುವಾಗ ಸಮಯ ಸುಮಾರು ರಾತ್ರಿ 10:45 ಗಂಟೆಗೆ ಪ್ರಭಾಕರ ಜಿ ಬಂದು ನನ್ನ ಬಗ್ಗೆ ಗೊತ್ತಿದೆಯಲ್ಲ ನಮ್ಮ ರೌಡಿಸಂ ಎಲ್ಲಾ ಗೊತ್ತುಂಟಾ ಎಂಬುದಾಗಿ ಹೇಳಿ ಏಕಾಏಕಿ ಆತನ ಕೈಯಲ್ಲಿದ್ದ ಪಿಸ್ತೂಲನ್ನು ಫಿರ್ಯಾದಿದಾರರ ಹೊಟ್ಟೆಗೆ ಗುರಿ ಹಿಡಿದನು.

ಫಿರ್ಯಾದಿದಾರರು ಶೂಟ್ ಮಾಡು ಎಂದಾಗ ಪ್ರಭಾಕರ ಜಿ, ಸಚಿನ್ ಮತ್ತು ಕಾರು ಚಾಲಕ ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದುಲ್ಲದೇ ಪ್ರಭಾಕರ ಜಿ ರವರು ಅಲ್ಲೇ ಇದ್ದ ವಿಸ್ಕಿ ಬಾಟಲಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದ ಪರಿಣಾಮ ರಕ್ತಗಾಯವಾಗಿದ್ದು, ನಂತರ ಆರೋಪಿತರು ಫಿರ್ಯಾದಿದಾರರನ್ನು ಕಾರಿನಲ್ಲಿ ಕರೆದುಕೊಂಡು ಮನೆಗೆ ತಂದು ಬಿಟ್ಟುಹೋಗಿರುತ್ತಾರೆ. ಫಿರ್ಯಾದಿದಾರರನ್ನ ಚಿಕಿತ್ಸೆಯ ಬಗ್ಗೆ ನೆರೆ ಮನೆಯವರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.

ಪಿರ್ಯಾದಿದಾರರಿಗೂ ಮತ್ತು ಪ್ರಭಾಕರ ಜಿ ರವರಿಗೂ ಹಣದ ವ್ಯವಹಾರ ಇದ್ದು ಅದೇ ಕಾರಣದಿಂದ ಆರೋಪಿತರು ಹಲ್ಲೆ ಮಾಡಿದ್ದಾಗಿದೆ ಎಂಬುದಾಗಿ ಆರೋಪಿಸಿ ಸುಂದರ ಶೇರಿಗಾರ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2015 ಕಲಂ: 363,323,324,325,506,ಜೊತೆಗೆ 34 ಐ ಪಿ ಸಿ ಮತ್ತು ಕಲಂ 25 ಶಸ್ರ್ತಾಸ್ರ್ತ ಕಾಯ್ದೆ 1959 ಪ್ರಕರಣ ದಾಖಲಿಸಲಾಗಿದೆ.

No Comments

Leave A Comment