Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಅಂಗಡಿ, ಕಾರಿಗೆ ಬೆಂಕಿ : ಗಂಗೊಳ್ಳಿ ಉದ್ವಿಗ್ನ , ನಿಷೇಧಾಜ್ಞೆ ಜಾರಿ

ಕುಂದಾಪುರ : ಗಂಗೊಳ್ಳಿಯಲ್ಲಿ ಬುಧವಾರ ನಸುಕಿನ ವೇಳೆ  ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ಭಾಸ್ಕರ್‌ ಶಣೈ ಎನ್ನುವವರ ವೆಂಕಟೇಶ್ವರ ಸ್ಟೋರ್‌ ಎಂಬ ಕಿರಾಣಿ  ಅಂಗಡಿ ಮತ್ತು ಕಾರಿಗೆ ಬೆಂಕಿ ಇಡಲಾಗಿದ್ದು ವಿಷಯ ತಿಳಿಯುತ್ತಿದ್ದಂತೆ ಕೋಮು ಸೂಕ್ಷ್ಮ ಗಂಗೊಳ್ಳಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪಿದೆ.

ಮೂವರು ಮುಸುಕು ಧಾರಿ ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.ಅಂಗಡಿಯಲ್ಲಿದ್ದ ಕೆಲ ದಿನಸಿ ಸಾಮಾನುಗಳು ಬೆಂಕಿಗೆ ಆಹುತಿಯಾಗಿದ್ದು, ಕಾರಿನ ಹೊರ ಭಾಗ ಸ್ವಲ್ಪ ಜಖಂಗೊಂಡಿದೆ.

 

ಘಟನೆ ನಡೆದದ್ದು ತಿಳಿಯುತ್ತಿದ್ದಂತೆ ಜನರು ಗುಂಪು ಸೇರತೋಡಗಿದ್ದು ಸಾಮರಸ್ಯ ಹಾಳು ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಕೋಮು ಸೂಕ್ಷ್ಮಸ್ಥಳದಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಕೈಗೊಂಡಿದ್ದು ,ಮುಂಜಾಗ್ರತ ಕ್ರಮವಾಗಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಉಡುಪಿ ಎಸ್‌ಪಿ ಅಣ್ಣಾಮಲೈ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ದುಷ್ಕರ್ಮಿಗಳನ್ನು ಕೂಡಲೆ ಬಂಧಿಸುವ ಭರವಸೆಯನ್ನು ಅವರು  ನೀಡಿದ್ದಾರೆ.

 

No Comments

Leave A Comment