Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಉಳ್ಳಾಲ :ನೈತಿಕ ಪೊಲೀಸ್‌ಗಿರಿ – ಯುವಕನಿಗೆ ಹಲ್ಲೆ

ಉಳ್ಳಾಲ : ಅನ್ಯಕೋಮಿಗೆ ಸೇರಿದ ವ್ಯಕ್ತಿಗಳ ತಂಡವೊಂದು ಇನ್ನೊಂದು ಕೋಮಿನ ಯುವಕ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಕೊರಂಗಿಪಳ್ಳದಲ್ಲಿ ವರದಿಯಾಗಿದೆ. ಆದಿತ್ಯವಾರ ರಾತ್ರಿ ಈ ಘಟನೆ ನಡೆದಿರುವುದು ತಿಳಿದುಬಂದಿದೆ.

ಈ ರೀತಿಯಾಗಿ ಹಲ್ಲೆಗಾಗಿರುವ ವ್ಯಕ್ತಿಯನ್ನು ಬೊಲಿಯಾರು ನಿವಾಸಿ ಪದ್ಮನಾಭ ಎಂದು ಗುರುತಿಸಲಾಗಿದ್ದು, ಹಲ್ಲೆಯ ಬಳಿಕ ಗಂಭೀರವಾಗಿ ಗಾಯಗೊಂಡಿರುವ ಈತ ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ : ಆದಿತ್ಯವಾರ ರಾತ್ರಿ ಪದ್ಮನಾಭ ಅವರು ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಅವರನ್ನು ಅಡ್ಡಗಟ್ಟಿದ ಸಿರಾಜ್‌, ನಿಸಾರ್‌, ಅಬುಬಕ್ಕರ್‌, ಅಶ್ರಫ್, ಬಶೀರ್‌, ಹಬೀಬ್‌ ಮತ್ತು ಆರ್‌.ಎಚ್‌. ಮೋನು ಅವರ ಇಬ್ಬರು ಮಕ್ಕಳು ಸೇರಿಕೊಂಡು ಪ್ರಾಣಾಂತಿಕವಾಗಿ ಹಲ್ಲೆ ಮಾಡಿದರು. ಈ ಸಂದರ್ಭದಲ್ಲಿ ಪದ್ಮನಾಭ ಅವರನ್ನು ಬಿಡಿಸಲು ಬಂದವರ ಮೇಲೆಯೂ ಈ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿದೆ ಎಂದು ತಿಳಿದುಬಂದಿದೆ.

ಹಲ್ಲೆ ನಡೆಸಿದ ವ್ಯಕ್ತಿಗಳಲ್ಲಿ ಹಲವರು ಈ ಭಾಗಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಎಂಬ ಅಂಶವೂ ಬೆಳಕಿಗೆ ಬಂದಿದೆ. ಪದ್ಮನಾಭ ಅವರು ಮುಸ್ಲಿಂ ಹುಡಿಗಿಯೊಬ್ಬಳೊಂದಿಗೆ ಸಂಪರ್ಕದಲ್ಲಿದ್ದುದೇ ಈ ಘಟನೆಗೆ ಕಾರಣವೆಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಣಾಜೆ ಪೊಲೀಸರು ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೊಬಸ್ತು ವ್ಯವಸ್ಥೆಗೊಳಿಸಿದ್ದಾರೆ.

No Comments

Leave A Comment