Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯನಿಗೆ ಕಪಾಳಮೋಕ್ಷ

ಚಂಡಿಪುರ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಅಪರಿಚಿತ ವ್ಯಕ್ತಿಯೋರ್ವ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದಾನೆ.

ತೃಣಮೂಲ ಕಾಂಗ್ರೆಸ್‌ನ ಸದಸ್ಯನಾಗಿರುವ ಅಭಿಷೇಕ್ ಬ್ಯಾನರ್ಜಿ ಇಂದು ಮಧ್ಯಾಹ್ನ ಚಂಡಿಪುರ್‌ನ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಭಿಷೇಕ್‌ರೊಂದಿಗೆ ಪೋಟೋ ತೆಗೆದುಕೊಳ್ಳುವ ನೆಪ ಹೇಳಿ ಅಪರಿಚಿತ ವ್ಯಕ್ತಿ ವೇದಿಕೆಗೆ ಬಂದಿದ್ದಾನೆ.

ವೇದಿಕೆ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲೇ ಬಲವಾಗಿ ಅಭಿಷೇಕ್ ಮುಖಕ್ಕೆ ಗುದ್ದಿದ್ದಾರೆ. ಕೂಡಲೇ ವೇದಿಕೆ ಮೇಲಿದ್ದ ಟಿಎಂಸಿ ಸದಸ್ಯರು ವ್ಯಕ್ತಿಗೆ ಇಗ್ಗಾಮುಗ್ಗ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾವ ಕಾರಣಕ್ಕಾಗಿ ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂಬುದು ತಿಳಿದುಬಂದಿಲ್ಲ. ಅಪರಿಚಿತ ವ್ಯಕ್ತಿ ಪಕ್ಷದ ಕಾರ್ಯಕರ್ತನಲ್ಲ. ಹೊರಗಿನವನಾಗಿದ್ದು, ಶೀಘ್ರವಾಗಿ ಕಾರಣ ತಿಳಿಯಲಾಗುವುದು ಎಂದು ಪಕ್ಷದ ಮುಖಂಡ ಸುವೇನ್ದು ಅಧಿಕಾರಿ ಹೇಳಿದ್ದಾರೆ.

No Comments

Leave A Comment