Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ದೆಹಲಿ-ಕಾಬೂಲ್ ವಿಮಾನ ಅಪಹರಣವಾಗಬಹುದು: ರೆಡ್ ಅಲರ್ಟ್

ನವದೆಹಲಿ: ದೆಹಲಿ ಕಾಬೂಲ್ ಮಾರ್ಗದ ವಿಮಾನ ಅಪಹರಣವಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಹಾಗೆಯೇ ಏರ್ ಇಂಡಿಯಾ ಉಗ್ರಗಾಮಿಗಳ ಗುರಿ ಎಂದು ಸೂಚನೆ ನೀಡಿವೆ.

ವಿಮಾನನಿಲ್ದಾಣದ ಐ ಜಿ ಐ ಅವರು ಎಲ್ಲ ವಿಮಾನನಿಲ್ದಾಣಗಳನ್ನು ಹೈ ಅಲರ್ಟ್ ನಲ್ಲಿಟ್ಟಿದ್ದು, ತಪಾಸಣೆಯನ್ನು ತೀವ್ರಗೊಳಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ.

1999ರಲ್ಲಿ ನಡೆದ ಐ ಸಿ 814 ಕಂಧಹಾರ ವಿಮಾನ ಅಪಹರಣ ಮಾದರಿಯಲ್ಲೇ ಈ ಅಪಹರಣ ನಡೆಯಬಹುದು ಎಂದು ವರದಿ ಸೂಚಿಸಿದೆ.

ಏರ್ ಇಂಡಿಯಾ ವಿಮಾನವೊಂದು ಅಪಹರಣವಾಗಲಿದೆ ಎಂದು ಕರೆ ಬಂದ ದಿನದ ನಂತರ ಈ ಎಚ್ಚರಿಕೆ ಗುಪ್ತಚರ ಇಲಾಖೆಯಿಂದ ಬಂದಿದೆ.

ಬೆಂಗಾಳಿಯೊಬ್ಬ ಈ ಕರೆ ಮಾಡಿದ್ದು ಎಂದು ಕೊಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅವರ ನಿರ್ಧಿಷ್ಟ ಗುರಿಯ ಬಗ್ಗೆ ಅಧಿಕಾರಿ ತಿಳಿಸಿಲ್ಲ. ಕೊಲ್ಕತ್ತಾದಲ್ಲಿ ವಿಮಾನಗಳು ಎಂದಿನಂತೆ ಕಾರ್ಯನಿರ್ವಿಹಿಸುತ್ತಿವೆ ಎಂದಿದ್ದಾರೆ.

ನಾಗರಿಕ ವಿಮಾನಯಾನ ಬ್ಯೂರೋ ಎಲ್ಲ ವಿಮಾನ ನಿಲ್ದಾಣಗಳಿಗೆ ತೀವ್ರ ಕಟ್ಟೆಚ್ಚರ ವಹಿಸಲು ತಿಳಿಸಿದ್ದು, ಭದ್ರತಾ ತಪಾಸಣೆಗಳನ್ನು ತೀವ್ರಗೊಳಿಸುವಂತೆ ಸೂಚಿಸಿದೆ.

No Comments

Leave A Comment