Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಏರ್‌ಏಷ್ಯಾ ಪತನ: 2 ಬೃಹತ್ ಗಾತ್ರದ ವಸ್ತು ಪತ್ತೆ

ಜಕಾರ್ತ: ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನ(8501)ದ ಭಗ್ನಾವಶೇಷ ಹುಡುತ್ತಿರುವ ತಂಡಕ್ಕೆ ಎರಡು ಬೃಹತ್ ಗಾತ್ರದ ವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸಾಗರ ತಳದಲ್ಲಿ ವಿಮಾನದ ಮುಖ್ಯಭಾಗವನ್ನು ಹೋಲುವ ಎರಡು ಬೃಹತ್ ಗಾತ್ರದ ವಸ್ತುಗಳು ಪತ್ತೆಯಾಗಿವೆ ಎಂದು ಇಂಡೊನೇಷ್ಯಾದ ರಾಷ್ಟ್ರೀಯ ಶೋಧನಾ ಮತ್ತು ರಕ್ಷಣಾ ಪಡೆಯ ಅಧಿಕಾರಿ ಬಂಬಾಂಗ್ ಸೊಯೆಲಿಸ್ಟ್ಯೊ ಅವರು ಮಾಹಿತಿ ನೀಡಿದ್ದಾರೆ.

ವಿಮಾನದ ಭಗ್ನಾವಶೇಷ ಹಾಗೂ ವಿಮಾನದ ಬ್ಲ್ಯಾಕ್ ಬಾಕ್ಸ್ ಇನ್ನು ಪತ್ತೆಯಾಗಿಲ್ಲ. ಬ್ಲ್ಯಾಕ್ ಬಾಕ್ಸ್ ಸೇರಿದಂತೆ ಇತರೆ ಅವಶೇಷಗಳ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಭಾನುವಾರ ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ 162 ಜನರನ್ನು ಕರೆದೊಯ್ಯುತ್ತಿದ್ದ ಏರ್‌ಏಷ್ಯಾ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ (ಕ್ಯೂಜಡ್ 8501) ವಿಮಾನ ಡಿ.28ರಂದು ವಿಮಾನ ನಿಯಂತ್ರಣ ಕೇಂದ್ರದ ಸಂಪರ್ಕವನ್ನು ಕಡಿದುಕೊಂಡ ಬಳಿಕ ನಾಪತ್ತೆಯಾಗಿತ್ತು. ಹಲವಾರು ದಿನಗಳ ಶೋಧದ ನಂತರ ಅವಶೇಷಗಳು ಮತ್ತು ಶವಗಳು ಈಗ ಪತ್ತೆಯಾಗುತ್ತಿವೆ.

No Comments

Leave A Comment