Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ವಿಜ್ಞಾನ, ತಂತ್ರಜ್ಞಾನ ಬಡಜನತೆಗೆ ತಲುಪಬೇಕು: ನರೇಂದ್ರ ಮೋದಿ

ಮುಂಬೈ: ಸಂಶೋಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಎಲ್ಲಾ ರೀತಿಯ ಜನರಿಗೂ ತಲುಪಿಸುವುದು ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಇಂದು ಮುಂಬೈನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 102 ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ರೀತಿಯ ಅನ್ವೇಷಣೆಗಳು ನಡೆಯುತ್ತಿವೆ. ಆದರೆ ಅದರ ಫಲ ಎಲ್ಲಾ ರೀತಿಯ ಜನತೆಗೆ ತಲುಪುವುದರಲ್ಲಿ ವಿಫಲವಾಗುತ್ತಿದೆ. ಭಾರತ ದೇಶದಲ್ಲಿ ವಾಣಿಜ್ಯ ವ್ಯವಹಾರ ಮಾಡುವುದು ಎಷ್ಟು ಸುಲಭವೋ ಅಷ್ಟೇ ಪರಿಣಾಮಕಾರಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಡೆಗೂ ಸಮಾನ ರೀತಿಯಲ್ಲಿ ಗಮನ ಹರಿಸಬೇಕು. ಆಗ ಮಾತ್ರವೇ ಆ ಕೆಲಸ ಯಶಸ್ವಿಯಾಗಲು ಸಾಧ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಭಾರತದಲ್ಲಿನ ಸಂಶೋಧಕರು ಹಾಗೂ ವಿಜ್ಞಾನಿಗಳು, ವಿಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸಗಳನ್ನು ಭಾರತವನ್ನು ಪರಿವರ್ತಿಸುವುದಕ್ಕೆ ಮಾಡಬೇಕೆ ಹೊರತು ಸರ್ಕಾರಕ್ಕಾಗಿ ಅಲ್ಲ. ಭಾರತವನ್ನು ಪರಿವರ್ತಿಸುವುದಕ್ಕಾಗಿ ನಾನು ನಿಮ್ಮ ಸಹಾಯವನ್ನು ಪಡೆದುಕೊಳ್ಳುತ್ತೇನೆ. ನಿಮಗೆ ನನಗಿಂತ ಹೆಚ್ಚು ಬೆಂಬಲ ನೀಡುವವರು ಸಿಗುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಯಶಸ್ವಿ ಕೆಲಸಗಳಾಗುವುದನ್ನು ಯಾವ ರೀತಿಯಲ್ಲಿ ಆಚರಿಸುತ್ತೇವೆಯೋ ಹಾಗೆಯೇ ಇತರೆ ಪ್ರದೇಶಗಳಲ್ಲಾಗುವ ಯಶಸ್ವಿ ಕಾರ್ಯಗಳನ್ನು ಪ್ರಶಂಸಿಸುವ ಮೂಲಕ ಅವರಿಗೂ ಬೆಂಬಲ ನೀಡಬೇಕು.

ನಮ್ಮ ದೇಶದ ವಿಜ್ಞಾನವನ್ನು ಇತರೆ ದೇಶಗಳಿಗಿಂತ ಹೆಚ್ಚು ವೈಶಿಷ್ಟ್ಯತೆಯಿಂದ ಕೂಡಿರಬೇಕು. ಇತರೆ ದೇಶಗಳಿಗೆ ನಮ್ಮ ದೇಶದ ಮೇಲಿರುವ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುವುದರೊಂದಿಗೆ ಮತ್ತಷ್ಟು ಉತ್ತಮವಾಗಿಸುವಲ್ಲಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಸಂಶೋಧಕರಿಗೆ ಪ್ರಧಾನಿ ಮೋದಿಯವರು ಸಲಹೆ ನೀಡಿದ್ದಾರೆ.

No Comments

Leave A Comment