Log In
BREAKING NEWS >
ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ, ಅಭಿಮಾನಿಗಳಿಗೆ ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.... ಅಕ್ಟೋಬರ್ 29ರ೦ದು ಬೆಳಿಗ್ಗೆ 4.45ಕ್ಕೆಕಾರ್ತಿಕ ಮಾಸದ ಪ್ರಯುಕ್ತ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ

ಲೇಹ್: ಋತುಮಾನ ದಾಖಲೆ ಚಳಿ

ಶ್ರೀನಗರ / ನವದೆಹಲಿ(ಪಿಟಿಐ/ಐಎಎನ್ ಎಸ್): ಜಮ್ಮು– ಕಾಶ್ಮೀರದಲ್ಲಿ ತಾಪಮಾನ ಕುಸಿದಿದ್ದು, ಗುರುವಾರ ರಾತ್ರಿ ಮೈನಸ್ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಈ ಋತುಮಾನದ ಕನಿಷ್ಠ ಚಳಿ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಮಧ್ಯೆ ದೆಹಲಿಯಲ್ಲಿ ಮಂಜಿನ ಜತೆಗೆ ಶುಕ್ರವಾರ ಬೆಳಿಗ್ಗೆ ಮಳೆ ಬಿದ್ದಿದೆ.

ಲೇಹ್ ಪ್ರದೇಶದಲ್ಲಿ ಗುರುವಾರ ಇಡೀ ರಾತ್ರಿ ಅತ್ಯಂತ ಕನಿಷ್ಠ ತಾಪಮಾನ ಮೈನಸ್ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬುಧವಾರ ರಾತ್ರಿ ಮೈನಸ್ 14.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ರಾಜ್ಯದಲ್ಲೇ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿರುವ ಸ್ಥಳ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಗಿಲ್ ವಲಯದಲ್ಲಿ ಮೈನಸ್ 16.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬುಧವಾರ ರಾತ್ರಿ ಮೈನಸ್ 15.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ತೀವ್ರ ಚಳಿಯಿಂದ ನೀರು ಮಂಜುಗಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಈ ಋತುಮಾನದಲ್ಲಿ ಜಮ್ಮು ಕಾಶ್ಮೀರದ ಕೇಂದ್ರ ಸ್ಥಳ ಎನಿಸುವ ಶ್ರೀನಗರದಲ್ಲಿ ಮೈನಸ್ 5.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಕಣಿವೆಯ ಪ್ರಮುಖ ಆಕರ್ಷಣೀಯ ತಾಣ ಎನಿಸಿರುವ ದಾಲ್ ಸರೋವರ ಹೆಪ್ಪುಗಟ್ಟುತ್ತಿದ್ದು, ಹಿಮದ ರೂಪ ಪಡೆಯುತ್ತಿದೆ. ನೀರು ಮಂಜಿನ ರೂಪ ತಾಳಿದ್ದು, ನಲ್ಲಿಗಳಿಂದ ಹೊರ ಬರುತ್ತಿಲ್ಲ. ರಸ್ತೆಗಳು ಮಂಜಿನಿಂದ ಆವೃತವಾಗಿವೆ. ಮುಂದಿನ 24 ಗಂಟೆಯಲ್ಲಿ ಹಿಮ ಹಾಗೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ: ದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ ದಟ್ಟ ಮಂಜು ಕವಿದ ವಾತಾರವಣ ಇತ್ತು. ಜತೆಗೆ, ನಗರದ ವಿವಿಧೆಡೆ ತುಂತುರು ಮಳೆಯೂ ಬಿದ್ದಿದೆ. ಹವಾಮಾನ ವೈಪರಿತ್ಯದಿಂದಾಗಿ 45 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

No Comments

Leave A Comment