Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಮಾರಕಾಸ್ತ್ರದಿಂದ ಕೊಚ್ಚಿ ರೌಡಿ ಶೀಟರ್‌ ಹತ್ಯೆ

ಹಾಸನ, ಡಿ. 28: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವರನ್ನು ಹತ್ಯೆಗೈದು ಪರಾರಿಯಾಗಿರುವ ಘಟನೆ ಶನಿವಾರ ತಡ ರಾತ್ರಿ ಹಾಸನದ ಸಹ್ಯಾದ್ರಿ ವೃತ್ತದದಲ್ಲಿ ನಡೆದಿದೆ.

ರೌಡಿ ಶೀಟರ್‌ ಸ್ಮಂ ಶೀಟರ್‌ ಮಂಜ (35) ಕೊಲೆಯಾದವರಾಗಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಮಂಜ ಮತ್ತು  ರೌಡಿ ಚೈಲ್ಡ್‌ ರವಿ ನಡುವೆ ಕೆಲವು ದಿನಗಳ ಹಿಂದೆ ಜಗಳ ನಡೆದಿದ್ದು, ನಿನ್ನೆ ತಡ ರಾತ್ರಿ ಹಾಸನದ ಸಹ್ಯಾದ್ರಿ ವೃತದ ಬಳಿ ರೌಡಿ ಚೈಲ್ಡ್‌ ರವಿ ಸಹಚರರು ರೌಡಿ ಶೀಟರ್‌ ಮಂಜನನ್ನು ಮಾರಕಾಸ್ತದಿಂದ ಕೊಚ್ಚಿ ಕೊಲೆ ಮಾಡಿ ಪಾರಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಹಾಸನ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment