Log In
BREAKING NEWS >
ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ...

ನ್ಯೂಜಿಲ್ಯಾಂಡ್ ಉಗ್ರ ದಾಳಿಯಲ್ಲಿ ಐವರು ಭಾರತೀಯರು ಸಾವು

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡಿನ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೇರಿದ್ದು, ಐವರು ಭಾರತೀಯರು ಮೃತಪಟ್ಟಿದ್ದಾರೆ.

ನ್ಯೂಜಿಲ್ಯಾಂಡ್ ನ ಭಾರತಿಯ ಹೈ ಕಮಿಷನ್ ಈ ಬಗ್ಗೆ ರವಿವಾರ ಮಾಹಿತಿ ನೀಡಿದ್ದು, ದಾಳಿಯ ವೇಳೆಗೆ ನಾಪತ್ತೆಯಾಗಿದ್ದ ಮೂವರು ಗುಜರಾತ್ ಮೂಲದವರು ಸೇರಿ ಐವರು ಭಾರತೀಯರು ಮೃತಪಟ್ಟಿರುವುದಾಗಿ ಹೇಳಿದೆ. ಇವರೊಂದಿಗೆ ಇಬ್ಬರು ಭಾರತೀಯ ಪ್ರಜೆಗಳು ಮತ್ತು ಇಬ್ಬರು ಭಾರತೀಯ ಮೂಲದವರು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಮೃತಪಟ್ಟ ಭಾರತೀಯರ ಹೆಸರನ್ನು ಇಲಾಖೆ ಬಿಡುಗಡೆ ಮಾಡಿದೆ. ಮೆಹಬೂಬ್ ಖೋಖರ್, ರಮೀಜ್ ವೋರಾ, ಆರಿಫ್ ವೋರಾ, ಆನ್ಸಿ ಆಲಿಬಾವ ಮತ್ತು ಒಜೈರ್ ಖಾದಿರ್ ಎಂದು ಗುರಿತಿಸಲಾಗಿದೆ.

25 ವರ್ಷದ ಒಜೈರ್ ಖಾದಿರ್ ಹೈದರಾಬಾದ್ ಮೂಲದವರಾಗಿದ್ದು, ಆವಿಯೇಶನ್ ವಿಧ್ಯಾರ್ಥಿಯಾಗಿದ್ದರು. ಆನ್ಸಿ ಆಲಿಬಾವ ( 25 ವರ್ಷ) ಕೇರಳ ಮೂಲದವರಾಗಿದ್ದಾರೆ. ರಮೀಜ್ ವೋರಾ ಮತ್ತು ಅವರ ತಂದೆ ಆರೀಫ್ ವೋರಾ ಕೂಡಾ ಈ ದಾಳಿಯಲ್ಲಿ ಮೃತರಾಗಿದ್ದು ಇವರು ವಡೋದರಾ ಮೂಲದವರಾಗಿದ್ದಾರೆ. 63 ವರ್ಷದ ಮೆಹಬೂಬ್ ಖೋಖರ್ ಅಹಮದಾಬಾದ್ ಮೂಲದವರಾಗಿದ್ದಾರೆ.

No Comments

Leave A Comment