Log In
BREAKING NEWS >
ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ...

ಮುಂಬೈ: ಪಾದಚಾರಿ ಮೇಲ್ಸುತುವೆ ಕುಸಿತ, ಐವರು ದುರ್ಮರಣ, 36 ಮಂದಿಗೆ ಗಾಯ

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ  ರೈಲು ನಿಲ್ದಾಣ ಬಳಿಯ ಪಾದಚಾರಿ ಮೇಲ್ಸುತುವೆ ಕುಸಿದ ಪರಿಣಾಮ ಐವರು ಮೃತಪಟ್ಟು 36 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 10 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು  ಮುಂಬೈ ಪೊಲೀಸರು ತಿಳಿಸಿದ್ದಾರೆ.ಹತ್ತರಿಂದ ಹನ್ನೇರಡು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಸಿಬ್ಬಂದಿಗಳು  ಮಾಹಿತಿ ನೀಡಿದ್ದಾರೆ.ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್  ರೈಲು ನಿಲ್ದಾಣದ ಪಾದಚಾರಿ ಮೇಲ್ಸುತುವೆಯೊಂದರ ಭಾಗವೊಂದು ಇಂದು ಸಂಜೆ ಕುಸಿದು ಬಿದಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್   ಫ್ಲಾಟ್ ಫಾರಂ1 ಉತ್ತರದ ಕೊನೆಯ ಭಾಗ ಹಾಗೂ ಟೈಮ್ಸ್ ಆಫ್ ಇಂಡಿಯಾ ಕಟ್ಟಡದ ಬಳಿಯ ಬಿಟಿ ಲೇನ್ ಸಂಪರ್ಕಿಸುವ  ಪಾದಚಾರಿ ಮೇಲ್ಸುತುವೆ ಕುಸಿದು ಬಿದಿದ್ದು, ಗಾಯಾಳುಗಲನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಿಂದಾಗಿ ಜನ ಸಂಚಾರದಲ್ಲಿ ಪರಿಣಾಮ ಉಂಟಾಗಿದ್ದು,ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
View image on TwitterView image on TwitterView image on Twitter
No Comments

Leave A Comment