Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಅನರ್ಹತೆ ಭೀತಿ; ಕೊನೆಗೂ ಕಲಾಪಕ್ಕೆ ಹಾಜರಾದ ಅತೃಪ್ತ ಶಾಸಕರು!

ಬೆಂಗಳೂರು: ಪಕ್ಷದ ವಿಪ್ ಉಲ್ಲಂಘಿಸಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಿರುವ ಬೆನ್ನಲ್ಲೇ ಅನರ್ಹ ಭೀತಿಗೆ ಒಳಗಾದ ಶಾಸಕರು ಕೊನೆಗೂ ಬುಧವಾರ ವಿಧಾನಸಭೆಯ ಕಲಾಪಕ್ಕೆ ಹಾಜರಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಾ ಮುಂಬೈಯಲ್ಲಿ ಠಿಕಾಣಿ ಹೂಡಿದ್ದ ಶಾಸಕ ರಮೇಶ್ ಜಾರಕಿ ಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ, ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ಇಂದು ಕಲಾಪಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ!

ಮಗಳ ಮದುವೆಗೆ ಹೋಗಿದ್ದೆ: ಜಾರಕಿಹೊಳಿ

ಸರ್..ಇಷ್ಟು ದಿನ ಮುಂಬೈನಲ್ಲೇ ಇದ್ದೀರಾ? ಅತೃಪ್ತಿ ಇದೆಯಾ ಎಂಬಿತ್ಯಾದಿ ಸುದ್ದಿಗಾರರ ಪ್ರಶ್ನೆಗೆ ಕೋಪದಿಂದಲೇ ಉತ್ತರಿಸಿದ ರಮೇಶ್ ಜಾರಕಿಹೊಳಿ, ನೀವೆ ಎಲ್ಲಾ ಹೇಳಿಬಿಟ್ಟಿದ್ದೀರಿ..ನನ್ನ ಹೀರೋ ಮಾಡಿ, ವಿಲನ್ ಮಾಡಿ ನಂತರ ಏಕಾಂಗಿ ಮಾಡಿಬಿಟ್ಟಿದ್ದೀರಿ ಎಂದರು.

ಮುಂಬೈನಲ್ಲಿ ಮಗಳ ಕಾರ್ಯಕ್ರಮದ ನಿಮಿತ್ತ ಹೋಗಿದ್ದೆ. ಅತೃಪ್ತಿ ಏನಿಲ್ಲ. ನಮ್ಮ ಬೇಡಿಕೆಗಳನ್ನು ಹೈಕಮಾಂಡ್ ಗೆ ತಿಳಿಸಿದ್ದೇವೆ. ಆದರೆ ಹೈಕಮಾಂಡ್ ವಿರುದ್ಧ ನಾನೇನು ಹೇಳಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ತಾನು ವೈಯಕ್ತಿಕ ವ್ಯವಹಾರದ ನಿಮಿತ್ತ ಮುಂಬೈಗೆ ತೆರಳಿದ್ದೆ ಎಂಬುದಾಗಿ ಶಾಸಕ ಬಿ.ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದು, ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ ಆಪರೇಷನ್ ಕಮಲದ ಹೊಣೆ ಹೊತ್ತಿದ್ದಾರೆ ಎನ್ನಲಾದ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಅವರು ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ತಾನು ಆಪರೇಷನ್ ಕಮಲಕ್ಕಾಗಿ ಮುಂಬೈಗೆ ಹೋಗಿಲ್ಲ. ಇದೆಲ್ಲ ವ್ಯವಸ್ಥಿತ ಪಿತೂರಿ. ನಾವೆಲ್ಲ ಸ್ನೇಹಿತರು. ಮುಂಬೈಗೆ ಬಂದಿದ್ದ ಅವರೆಲ್ಲ, ನನಗೆ ಸಿಕ್ಕಿದಾಗ ಮಾತನಾಡಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ.

No Comments

Leave A Comment