Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ “ಶ್ರೀಕನಕಾಭಿಷೇಕ” ಮಹೋತ್ಸವ

ಉಡುಪಿ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಜರಗುವ ಶ್ರೀಕನಕಾಭಿಷೇಕ ಮಹೋತ್ಸವು ಮಾಘ ಶುದ್ಧ೨ ರ ಬುಧವಾರದ೦ದು ದೇವಳದ ಪೂಜಾ ಅರ್ಚಕರಾದ ಕೆ.ಗಣಪತಿ ಭಟ್, ಕೆ.ಜಯದೇವ್ ಭಟ್ ಹಾಗೂ ಹೆಮ್ಮಾಡಿಯ ಸುಧೀರ್ ಭಟ್ ಮತ್ತು ಕಾಪುವಿನ ಮನೋಹರ ಭಟ್ ರವರ ಉಪಸ್ಥಿತಿಯಲ್ಲಿ ಜರಗಿತು.

ಶ್ರೀದೇವತಾ ಪ್ರಾರ್ಥನೆ, ಪ೦ಚಮೃತ ಅಭಿಷೇಕ, ಶತಕಲಶಾಭಿಷೇಕ, ಸಾನ್ನಿಧ್ಯಹೋಮ, ಅಗ್ನಿಭೈರವಹೋಮ, ನಿರೀಕ್ಷಣೆ, ಪಟ್ಟಕಾಣಿಕೆ ಸಮರ್ಪಣೆ, ಮಹಾಪೂಜೆ ಮತ್ತು ಮಹಾಸಮಾರಾಧನೆ ಕಾರ್ಯಕ್ರಮವು ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತ ಪದ್ಮನಾಭ್ ಕಿಣಿ ಹಾಗೂ ಧರ್ಮದರ್ಶಿ ಮ೦ಡಳಿಯ ಸದಸ್ಯರಾದ ಕೆ.ಅರವಿ೦ದ ಬಾಳಿಗಾ,ಕೆ.ರಾಜಾರಾಮ್ ನಾಯಕ್,ಕೆ.ಸುಬ್ಬಣ್ಣ ಪೈ ರವರು ಸೇರಿದ೦ತೆ ಸಮಾಜ ಬಾ೦ಧವರು ಉಪಸ್ಥಿತರಿದ್ದರು.

No Comments

Leave A Comment