Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸಿಎಂ ಯೋಗಿ ಮೊದಲು ಯುಪಿ ಬಗ್ಗೆ ಕಾಳಜಿ ವಹಿಸಲಿ: ಮಮತಾ ಆಕ್ರೋಶ

ಕೋಲ್ಕತ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರಿಂದು ಮಂಗಳವಾರ ಪಶ್ಚಿಮ ಬಂಗಾಲದ ಪುರೂಲಿಯಾ ದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು ಇದಕ್ಕೆ ಮುನ್ನವೇ ಅವರ ಮೇಲೆ ಮುಗಿಬಿದ್ದಿರುವ ಸಿಎಂ ಮಮತಾ ಬ್ಯಾನರ್ಜಿ, “ಇತರ ರಾಜ್ಯಗಳ ಬಗ್ಗೆ ಕಮೆಂಟ್‌ ಮಾಡುವ ಮೊದಲು ನೀವು (ಯೋಗಿ ಆದಿತ್ಯನಾಥ್‌) ನಿಮ್ಮ ರಾಜ್ಯವನ್ನು ನೋಡಿಕೊಳ್ಳಿ’ ಎಂದು ಕಟಕಿಯಾಡಿದ್ದಾರೆ.

ಯುಪಿ ಸಿಎಂ ಯೋಗಿ ಅವರ ಹೆಲಿಕಾಪ್ಟರ್‌ ರಾಜ್ಯದಲ್ಲಿ ಇಳಿಯುವುದಕ್ಕೆ ಈ ಮೊದಲು ಅನುಮತಿ ನಿರಾಕರಿಸಲಾದುದರ ಬಗ್ಗೆ ಮಮತಾ ಬ್ಯಾನರ್ಜಿ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, “ಯೋಗಿ ಆದಿತ್ಯನಾಥ್‌ ಅವರಿಗೆ ಮೊದಲು ಅವರ ಉತ್ತರ ಪ್ರದೇಶವನ್ನು ನೋಡಿಕೊಳ್ಳುವಂತೆ ಕೇಳಿ’  ಎಂದು ಗುಡುಗಿದರು.

‘ಉತ್ತರ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು  ಅಮಾಯಕ ಜನರನ್ನು ಕೊಲ್ಲಲಾಗಿದೆ; ಕರ್ತವ್ಯ ನಿರತ ದಕ್ಷ  ಪೊಲೀಸರನ್ನು ಕೂಡ ಹತ್ಯೆ ಮಾಡಲಾಗಿದೆ; ಹಲವರನ್ನು ಚಚ್ಚಿ  ಸಾಯಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಅವರು ಸ್ವತಃ ಇವತ್ತು ಚುನಾವಣೆಗೆ ನಿಂತರೆ ಸೋಲುವುದು ಖಚಿತ; ಆತನಿಗೆ ಯುಪಿ ಯಲ್ಲಿ ನಿಲ್ಲಲು ಒಂದು ಜಾಗವೂ ಇಲ್ಲ; ಅದಕ್ಕಾಗಿ ಆತ ಪಶ್ಚಿಮ ಬಂಗಾಲದಲಿ ಅಲೆಯುತ್ತಿದ್ದಾರೆ’ ಎಂದು ಮಮತಾ ಬ್ಯಾನರ್ಜಿ, ಯೋಗಿ ಆದಿತ್ಯನಾಥ್‌ ವಿರುದ್ಧ ಕಿಡಿ ಕಾರಿದರು.

No Comments

Leave A Comment