Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮಣಿಪಾಲ್‌ ಗ್ರೂಪ್‌ಗೆ ಅನಿಲ್‌ ಶಂಕರ್‌ ನೂತನ ಗ್ಲೋಬಲ್‌ ಸಿಎಫ್ಒ

ಮಣಿಪಾಲ: ಮಾಧ್ಯಮ, ಪ್ರಕಾಶನ, ಮುದ್ರಣ, ಪ್ಯಾಕೇಜಿಂಗ್‌, ಜಾಹೀರಾತು, ಹೋಮ್‌ ಫ್ರಾಗ್ರೆನ್ಸ್‌, ಇಂಧನ ಮತ್ತು ಮೂಲಸೌಕರ್ಯ ಉದ್ಯಮಗಳಲ್ಲಿ ಮುಂಚೂಣಿಯಲ್ಲಿರುವ ದಿ ಮಣಿಪಾಲ್‌ ಗ್ರೂಪ್‌ನ ನೂತನ ಜಾಗತಿಕ ಮುಖ್ಯ ಹಣಕಾಸು ಅಧಿಕಾರಿ (ಗ್ಲೋಬಲ್‌ ಸಿಎಫ್ಒ) ಆಗಿ ಜಿ. ಅನಿಲ್‌ ಶಂಕರ್‌ ನೇಮಕವಾಗಿದ್ದಾರೆ.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಫೆಲೊಮೆಂಬರ್‌ ಆಗಿರುವ ಅನಿಲ್‌ ಅವರು ಈ ಹಿಂದೆ ಆಪ್ಟಿಕಲ್‌ಲೆನ್ಸ್‌ಗಳ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜಿಕೆಬಿ ಆಪ್ಟಿಕಲ್ಸ್‌ನ ಸಿಇಒ ಆಗಿದ್ದವರು. ಎಸಿಲಾರ್‌ ಗ್ರೂಪ್‌, ಅರವಿಂದ್‌ ಮಿಲ್ಸ್‌ ಮತ್ತು ಬಿಪಿಎಲ್‌ ಗ್ರೂಪ್‌ಗ್ಳಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಹಿರಿಯ ಮ್ಯಾನೇಜ್‌ಮೆಂಟ್ ಹುದ್ದೆಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ. ಇದಲ್ಲದೆ, ಹಲವು ಮುಂಚೂಣಿ ಕಾರ್ಪೊರೇಟ್ ಉದ್ಯಮಗಳ ಆಡಳಿತ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮಣಿಪಾಲ್‌ ಗ್ರೂಪ್‌ನ ನಾಯಕತ್ವ ತಂಡಕ್ಕೆ ಒಂದು ನಿರ್ಣಾಯಕ ಕಾಲಘಟ್ಟದಲ್ಲಿ ಅನಿಲ್‌ ಅವರ ನೇಮಕಾತಿ ಒಂದು ಉತ್ತಮ ನಿರ್ಧಾರ. ಅವರು ಮೌಲ್ಯಯುತಅನುಭವ ಹೊಂದಿದ್ದಾರೆ. ಸುಸ್ಥಿರ ಔದ್ಯಮಿಕ ಪ್ರಗತಿ ಮತ್ತು ವಿಸ್ತೃತ ಸಾಮಾಜಿಕ ಉದ್ದೇಶಗಳನ್ನು ಸಾಧಿಸುವಲ್ಲಿ ಹಣಕಾಸಿನ ಪಾತ್ರವನ್ನು ಸರಿಹೊಂದಿಸಿಕೊಳ್ಳುವ ಮಣಿಪಾಲ್‌ ಗ್ರೂಪ್‌ನ ತಾತ್ವಿಕ ನೆಲೆಯನ್ನು ಅನಿಲ್‌ ಕೂಡ ಹೊಂದಿದ್ದಾರೆ ಎಂಬುದಾಗಿ ಗ್ರೂಪ್‌ನ ಆಡಳಿತ ನಿರ್ದೇಶಕ ಗೌತಮ್‌ ಪೈ ಹೇಳಿದ್ದಾರೆ.

ಮಣಿಪಾಲ್‌ ಗ್ರೂಪ್‌ನಲ್ಲಿ ಈ ಹೊಸ ಜವಾಬ್ದಾರಿಯನ್ನು ನಿಭಾಯಿಸಲು ಉತ್ಸುಕನಾಗಿದ್ದೇನೆ. ಗ್ರೂಪ್‌ನ ಮುನ್ನಡೆಯುವ ಸ್ಫೂರ್ತಿ ಮತ್ತು ನಾವೀನ್ಯ ಹಾಗೂ ತಂತ್ರಜ್ಞಾನಗಳನ್ನು ಸರಿಹೊಂದಿಸಿಕೊಂಡು ತಾನು ತೊಡಗುವ ಎಲ್ಲ ರಂಗಗಳಲ್ಲಿಯೂ ಮುಂಚೂಣಿಗೇರುವ ದೃಷ್ಟಿಕೋನಗಳು ತನಗೂ ಸ್ಫೂರ್ತಿದಾಯಕ ಎಂದು ಅನಿಲ್‌ ಶಂಕರ್‌ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ, ಪ್ರಕಾಶನ, ಮುದ್ರಣ, ಪ್ಯಾಕೇಜಿಂಗ್‌, ಜಾಹೀರಾತು, ಹೋಮ್‌ ಫ್ರಾಗ್ರೆನ್ಸ್‌, ಇಂಧನ ಮತ್ತು ಮೂಲಸೌಕರ್ಯ ಉದ್ಯಮಗಳಲ್ಲಿ ದೇಶದ ಮುಂಚೂಣಿ ಕಂಪೆನಿಗಳಲ್ಲಿ ಒಂದಾಗಿರುವ ದಿ ಮಣಿಪಾಲ್‌ ಗ್ರೂಪ್‌, ಅಮೆರಿಕ, ಜರ್ಮನಿ, ಮೆಕ್ಸಿಕೊ, ಆಫ್ರಿಕ ಮತ್ತು ಯುರೋಪ್‌ಗ್ಳಲ್ಲಿಯೂ ವ್ಯವಹಾರ ವಿಸ್ತರಿಸಿಕೊಂಡಿದ್ದು, 7,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ.

No Comments

Leave A Comment