Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ವಿಕಸನ ಸಪ್ತಾಹ ತರಬೇತಿ ಕಾರ್ಯಕ್ರಮ

ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿಗಳ ಪ್ರತಿಭೋಜ್ವಲನ ಕಾರ್ಯಕ್ರಮ ವಿಕಸನ ಸಪ್ತಾಹದ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಒಂದು ವಾರ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಯಿತು.

ಕಲಾವಿದರಾದ ಪಿ.ಎನ್.ಆಚಾರ್ಯ ಜಲವರ್ಣ ಚಿತ್ರಕಲೆ, ಜಗದೀಶ್ ಆಚಾರ್ಯ ಕಾಗದದ ಕಲೆ, ಕಮಲ್ ಅಹ್ಮದ್ ರೇಖಾಚಿತ್ರಕಲೆ, ಪ್ರೊ. ಅನಂತಪದ್ಮನಾಭ ರಾವ್ ಸೃಜನಾತ್ಮಕ ಬರವಣಿಗೆ, ಗಿಡಿಯೋನ್ ಅಮ್ಮನ್ನ ಆಂಗ್ಲಭಾಷಾ ಕಲಿಕೆ, ಶಶಿಕಲಾ ರಾಜವರ್ಮ ಅರಿಗ ಅಭಿನಯಕಲೆ, ಆಶಾ ಬಿ.ಟಿ. ಭಾವಗೀತೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ರವಿರಾಜ್ ನಾಯಕ್, ತನುಜಾ ಕೆಂಜೂರು, ತಾರಮತಿ, ಶ್ರೀಮತಿ ಸಂಗೀತಾ ರಾವ್ ತರಬೇತಿ ನೀಡಿದರು. ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ. ಹಾಗೂ ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

No Comments

Leave A Comment