Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪರ್ವತಾರೋಹಣದ ವೇಳೆ ದುರಂತ: ಕಂದರಕ್ಕೆ ಉರುಳಿ ವಿಶ್ವಖ್ಯಾತಿಯ ‘ಬಿಕಿನಿ ಕ್ಲೈಂಬರ್’ ದುರ್ಮರಣ!

ತೈಪೆ: ಬಿಕಿನಿ ಧರಿಸಿ ಪರ್ವತದ ತುದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ತಾಣಗಳಲ್ಲಿ ಹಾಕಿಕೊಳ್ಳುವ ಮೂಲಕ ವಿಶ್ವಖ್ಯಾತಿ ಗಳಿಸಿದ್ದ ಬಿಕಿನಿ ಕ್ಲೈಂಬರ್ ಗಿಗಿ ವೂ ಪರ್ವತಾರೋಹಣ ವೇಳೆ ಕಂದರಕ್ಕೆ ಉರುಳಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಯುವತಿಯ ಮೃತದೇಹವನ್ನು ತೈವಾನಿನ ರಕ್ಷಣಾ ಪದೆಗಳು ಪತ್ತೆ ಮಾಡಿದೆ.ತೈವಾನ್ ಯುಶಾನ್ ನ್ಯಾಷನಲ್ ಪಾರ್ಕಿನ ಕಂದಕಕ್ಕೆ ಉರುಳಿ ಯುವತಿ ಗಿಗಿ ವು ಸಾವನ್ನಪ್ಪಿದ್ದಾಳೆ. ಈ ಮುನ್ನ ಗಿಗಿ ವೂ  ತಾನು ಪರ್ವತ ಏರುವಾಗ ಜಾರಿ ಬಿದ್ದಿದ್ದೇನೆ, ಕಾಲಿಗೆ ಗಂಭೀರ ಗಾಯವಾಗಿದೆ, ನನ್ನನ್ನು ರಕ್ಷಿಸು ಎಂದು ತನ್ನ ಗೆಳತಿಯೊಬ್ಬಳಿಗೆ ಸ್ಯಾಟಲೈಟ್ ಫೋನ್ ಮೂಲಕ ಕರೆ ಮಾಡಿ ವಿಚಾರ ತಿಳಿಸಿದ್ದಳು.
ಕೆಟ್ಟ ಹವಾಮಾನ ಹಾಗು ದುರ್ಗಮ ಪ್ರದೇಶವಾದ ಕಾರಣಸೋಮವಾರವೇ ರಕ್ಷಣಾ ಪಡೆಗಳು ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುವಲ್ಲಿ ವಿಳಂಬವಾಗಿತ್ತು.ಹೀಗಾಗಿ 28 ಗಂಟೆಗಳ ಬಳಿಕ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಅಷ್ಟರಲ್ಲೇ ಆಕೆ ಸಾವನ್ನಪ್ಪಿದ್ದಳು ಎಂದು ರಕ್ಷಣಾ ಪಡೆ ಸದಸ್ಯರು ಹೇಳಿದ್ದಾರೆ.
ಗಿಗಿ ವೂ ಪರ್ವತಾರೋಹಿಗಳ ದಿರಿಸಿನೊಡನೆ ಪರ್ವತ ಏರುತ್ತಿದ್ದು ಶಿಖರದ ತುದಿಗೆ ತಲುಪಿದಾಗ ಕೇವಲ ಬಿಕಿನಿ ಧರಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಅದನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಿದ್ದಳು. ಇದರಿಂದ ಸಾಮಾಜಿಕ ತಾಣದಲ್ಲಿ ಅಪಾರ ಅಭಿಮಾನಿಗಳನ್ನು ಸಹ ಆಕೆ ಗಳಿಸಿಕೊಂಡಿದ್ದಳು.
ಆಕೆ ಇದುವರೆಗೆ 100 ಕ್ಕಿಂತ ಹೆಚ್ಚಿನ  ಪರ್ವತಗಳನ್ನು ಏರಿದ್ದಾಗಿ ಗಿಗಿ ಕಳೆದ ವರ್ಷ ಮಾದ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಳು.”100 ಪರ್ವತಗಳನ್ನು ಏರಿದ್ದು ನೂರರಲ್ಲಿ ಬಹಳಷ್ಟು ಎಂದರೆ ಸುಮಾರು 97 ಬಾರಿ ಬೇರೆ ಬೇರೆ ಬಿಕಿನಿ ಧರಿಸಿ ಫೋಟೋ ತೆಗೆಸಿಕೊಂಡಿದ್ದೇನೆ. ಕೆಲವೊಮ್ಮೆ ಆಕಸ್ಮಿಕವಾಗಿ ಬಿಕಿನಿ ಪುನರಾವರ್ತನೆ ಆಗಿದೆ” ಆಕೆ ಹೇಳಿದ್ದಳು.
ಶನಿವಾರ ಸಹ ಗಿಗಿ ವೂ  ಇದೇ ರೀತಿ ಪರ್ವತ ಏರಲು ಮುಂದಾಇದ್ದಾಳೆ ಆವೇಳೆ ನಡೆಯುವಾಗ ಆಯ ತಪ್ಪಿದ ಪರಿಣಾಮ 20 ಮೀ. ಆಳದ ಕಂದಕಕ್ಕೆ ಉರುಳಿ ಬಿದ್ದು ಸಾವನ್ನಪ್ಪಿದ್ದಾಳೆ.
No Comments

Leave A Comment