Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮಂಗನ ಕಾಯಿಲೆ: ಮಹಿಳೆ ಸಾವು

ಉಡುಪಿ/ಸಾಗರ: ಮಣಿಪಾಲ ಆಸ್ಪತ್ರೆಗೆ ದಾಖಲಾದ ಸಾಗರ ತಾಲೂಕು ಅರಲಗೋಡಿನ ಲಕ್ಷ್ಮೀದೇವಿ (82) ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಪ್ರಕರಣ ಇದೇ ಮೊದಲದ್ದಾಗಿದೆ.

ಇದುವರೆಗೆ ನೂರು ಮಂದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಅವರೆಲ್ಲರೂ ಸಾಗರ ಆಸುಪಾಸಿನವರು. 40 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 59 ಜನರಿಗೆ ಇರದ ಬಗ್ಗೆ ವರದಿಯಾಗಿದೆ. ಒಬ್ಬರ ವರದಿಬರಬೇಕಾಗಿದೆ. 76 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಗರ ತಾಲೂಕಿನಲ್ಲಿ ಮಂಗನಕಾಯಿಲೆಯ ರೌದ್ರಾವತಾರ ಮುಂದುವರಿದಿದ್ದು, ಭಾನುವಾರ ಮತ್ತೆ ನಾಲ್ಕು ಮಂದಿಗೆ ಜ್ವರ ಕಾಣಿಸಿಕೊಂಡಿದೆ.

ಇವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಲೂಕಿನ ಅರಳಗೋಡು ಭಾಗದಲ್ಲಿ ಮಂಗನಕಾಯಿಲೆ ನಿಯಂತ್ರಣಕ್ಕೆ ಬಾರದೆ ದಿನೇದಿನೆ ಉಲ್ಬಣಗೊಳ್ಳುತ್ತಲೇ ಇದೆ. ಜ್ವರ ಪೀಡಿತರಾದ ಗಣಪತಿ ಮರಾಠಿಕೇರಿ, ಸರೋಜಾ ಬಣ್ಣುಮನೆ, ಚೆನ್ನ ಅರಳಗೋಡು ಹಾಗೂ ಲತಾ ಕಾರ್ಗಲ್‌ ಎಂಬುವರು ಅರಳಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಾಲ್ವರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಮತ್ತೆ ಮಂಗಗಳು ಮೃತಪಟ್ಟಿದ್ದು ಕೆಎಫ್‌ಡಿ ಶಂಕೆ ವ್ಯಕ್ತವಾಗಿದೆ. ಅರಳಗೋಡಿನಲ್ಲಿ ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ಮಂಗಗಳ ಸಂಖ್ಯೆ 34ಕ್ಕೆ ಏರಿದೆ. ದಟ್ಟ ಅರಣ್ಯ ಹಾಗೂ ಎತ್ತರದ ಮರಗಳ ಮೇಲೆಯೇ ಮೃತಪಟ್ಟ ಮಂಗಗಳ ಲೆಕ್ಕ ಸಿಕ್ಕಿಲ್ಲದಿರುವದರಿಂದ ಈ ಸಂಖ್ಯೆ ನೂರು ದಾಟಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೊಂದೆಡೆ ಸಾಗರ ಸಮೀಪದ ಕಲ್ಮನೆಯಲ್ಲಿ ಮೃತ ಮಂಗ ಪತ್ತೆಯಾಗಿದೆ.

No Comments

Leave A Comment