Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಾರಲ್ಲೇ ಎಲ್ಲ ಮುಗಿಸಿ ಪ್ಯಾಂಟ್ ಹಾಕಲು ಮರೆತ ನಟಿ ರಕುಲ್-ಅಭಿಮಾನಿಗೆ ಬೆಂಡೆತ್ತಿದ ನಟಿ!

ಹೈದರಾಬಾದ್: ನಟಿಯರು ತೊಟ್ಟಿದ ಉಡುಗೆ ಕುರಿತಂತೆ ಅಭಿಮಾನಿಗಳು ಟ್ವೀಟ್ ಮಾಡಿ ಕಾಲೆಳೆಯುವುದು ಸಾಮಾನ್ಯ. ಅಂತೆ ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಬಗ್ಗೆ ಅಭಿಮಾನಿಯೊಬ್ಬ ನೀಚವಾಗಿ ಟ್ವೀಟ್ ಮಾಡಿದ್ದಾನೆ.

ನಟಿ ರಕುಲ್ ಪ್ರೀತ್ ಶಾರ್ಟ್ ಧರಿಸಿ ಕಾರಿನಿಂದ ಹೊರಗೆ ಬರುತ್ತಿದ್ದ ವೇಳೆ ಯಾರೋ ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಭಿಮಾನಿ ಒಬ್ಬ ಫೋಟೋ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾನೆ.

ಭಗತ್ ಎಂಬಾತ ಈ ಫೋಟೋಗೆ ಕಾರಿನಲ್ಲಿ ಎಲ್ಲ ಮುಗಿದ ಮೇಲೆ ಆಕೆ ಪ್ಯಾಂಟ್ ಧರಿಸಲು ಮರೆತಿದ್ದಾಳೆ ಎಂದು ಟ್ವೀಟ್ ಮಾಡಿದ್ದಾನೆ.

ಇದರಿಂದ ಕೋಪಗೊಂಡ ನಟಿ ರಕುಲ್ ಟ್ವೀಟ್ ಗೆ ಪ್ರತಿಕ್ರಿಯಿಸಿ ನಿನ್ನ ತಾಯಿ ಕೂಡ ಕಾರಿನಲ್ಲಿ ಎಲ್ಲ ಸೆಶನ್ ನಡೆಸಿದ್ದಾಳೆ ಎನಿಸುತ್ತದೆ. ಹಾಗಾಗಿ ನೀನು ಇಷ್ಟು ಎಕ್ಸ್ ಪರ್ಟ್ ಆಗಿದ್ದೀಯಾ. ನಿನ್ನ ತಾಯಿಗೆ ಈ ಸೆಶನ್ ಮಾಹಿತಿಗಳನ್ನು ಹೊರತುಪಡಿಸಿ ನಿನಗೆ ಸ್ವಲ್ಪ ಬುದ್ಧಿ ಹೇಳಿಕೊಡು ಎಂದು ಕೇಳಿಕೊಳ್ಳುತ್ತೇನೆ. ನಿಮ್ಮಂತಹ ಜನರು ಇರುವವರೆಗೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಸಮಾನತೆ ಬಗ್ಗೆ ಚರ್ಚೆ ಮಾಡುವುದರಿಂದ ಮಹಿಳೆಯರಿಗೆ ರಕ್ಷಣೆ ಸಿಗುವುದಿಲ್ಲ ಎಂದು ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.

No Comments

Leave A Comment