Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವದ ಕೊನೆಯ ಅಂಗವಾಗಿ ಚೂರ್ಣೋತ್ಸವ…

ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಸಪ್ತೋತ್ಸವದ ಕೊನೆಯ ಅಂಗವಾಗಿ ಚೂರ್ಣೋತ್ಸವ ನಡೆಯಿತು.ಮಹಾಪೂಜೆಯ ನಂತರ ಬಲಿಮೂರ್ತಿಯನ್ನು ಬ್ರಹ್ಮರಥದಲ್ಲಿಇರಿಸಿ ಅಷ್ಟಮಠಾಧೀಶರು ರಥದಲ್ಲಿ ಪೂಜೆಯನ್ನು ಮಾಡಿ ಬ್ರಹ್ಮರಥವನ್ನು ಭಕ್ತರೊಂದಿಗೆ ಮಠಾಧೀಶರು ಎಳೆದರು.ಈ ಬಾರಿ 6 ಮಂದಿ ಶ್ರೀ ಕೃಷ್ಣ ಭಕ್ತರು ರಥಬೀದಿಯಲ್ಲಿ ರಥದ ಹಿಂಭಾಗದಲ್ಲಿ 1 ಸುತ್ತು ಅಂಗ ಪ್ರದಕ್ಷಣೆ (ಉರುಳು ಸೇವೆ) ಮಾಡಿದರು.

ಪಲ್ಲ ಪೂಜೆ ಆದಮೇಲೆ ಮಧ್ವಮಂಟಪದಲ್ಲಿ ತೊಟ್ಟಿಲು ಪೂಜೆ ಸಹಿತ ಅಷ್ಟಾವಧಾನ ನಡೆದು ಓಕುಳಿಯ ನಂತರ ಮಧ್ವ ಸರೋವರದಲ್ಲಿ ಅವಭ್ರತ ಸ್ನಾನದೊಂದಿಗೆ ಉತ್ಸವ ಸಮಾಪ್ತಿಯಾಯಿತು. ಶ್ರೀ ಕೃಷ್ಣ ಮಠದಲ್ಲಿ ಸಪ್ತೋತ್ಸವದ ಕೊನೆಯ ಅಂಗವಾಗಿ ಚೂರ್ಣೋತ್ಸವ ನಡೆಯಿತು.ಮಹಾಪೂಜೆಯ ನಂತರ ಬಲಿಮೂರ್ತಿಯನ್ನು ಬ್ರಹ್ಮರಥದಲ್ಲಿಇರಿಸಿ ಅಷ್ಟಮಠಾಧೀಶರು ರಥದಲ್ಲಿ ಪೂಜೆಯನ್ನು ಮಾಡಿ ಬ್ರಹ್ಮರಥವನ್ನು ಭಕ್ತರೊಂದಿಗೆ ಮಠಾಧೀಶರು ಎಳೆದರು.

ಈ ಬಾರಿ 6 ಮಂದಿ ಶ್ರೀ ಕೃಷ್ಣ ಭಕ್ತರು ರಥಬೀದಿಯಲ್ಲಿ ರಥದ ಹಿಂಭಾಗದಲ್ಲಿ 1 ಸುತ್ತು ಅಂಗ ಪ್ರದಕ್ಷಣೆ (ಉರುಳು ಸೇವೆ) ಮಾಡಿದರು.ಪಲ್ಲ ಪೂಜೆ ಆದಮೇಲೆ ಮಧ್ವಮಂಟಪದಲ್ಲಿ ತೊಟ್ಟಿಲು ಪೂಜೆ ಸಹಿತ ಅಷ್ಟಾವಧಾನ ನಡೆದು ಓಕುಳಿಯ ನಂತರ ಮಧ್ವ ಸರೋವರದಲ್ಲಿ ಅವಭ್ರತ ಸ್ನಾನದೊಂದಿಗೆ ಉತ್ಸವ ಸಮಾಪ್ತಿಯಾಯಿತು. ಚೂರ್ಣೋತ್ಸವದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು,ಕೃಷ್ಣಾಪುರ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುಪ್ರವೀರ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರು ಭಾಗವಹಿಸಿದ್ದರು.

No Comments

Leave A Comment